ಬುಧವಾರ, ಆಗಸ್ಟ್ 4, 2021
27 °C

ಮದುವೆಯಾಗುವಂತೆ ದುಲ್ಕರ್ ಸಲ್ಮಾನ್‌ ಮನವೊಲಿಸಲು ಯತ್ನಿಸಿದ್ದರು: ನಿತ್ಯಾ ಮೆನನ್‌

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಕನ್ನಡ ಸಿನಿಮಾರಂಗದ ಮೂಲಕ ದಕ್ಷಿಣ ಭಾರತದ ಸಿನಿ ಜಗತ್ತಿಗೆ ಪರಿಚಿತರಾದ ನಿತ್ಯಾ ಮೆನನ್‌ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

ಭಾವ ತುಂಬಿ ಅಭಿನಯಿಸುವ ನಿತ್ಯಾ ಮೆನನ್‌ ‘ಮೈನಾ’ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ನಟಿಯಾಗಿದ್ದಾರೆ. ಎಂತಹದೇ ಪಾತ್ರ ಕೊಟ್ಟರೂ ಪರಕಾಯ ಪ್ರವೇಶ ಮಾಡಿ ಅಭಿನಯಿಸುವ ಟ್ಯಾಲೆಂಟ್‌ ಅವರಲ್ಲಿದೆ. ತಮಿಳಿನಲ್ಲಿ ಜಯಲಲಿತಾ ಆಗಿ ತೆರೆಯ ಮೇಲೆ ಬರಲಿದ್ದಾರೆ.

ಇತ್ತೀಚೆಗೆ ‘ಸಿನಿಮಾ ಏಕ್ಸ್‌ಪ್ರೆಸ್‌’ಗೆ ನೀಡಿದ ಸಂದರ್ಶನದಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ಯುವ ನಟ ದುಲ್ಕರ್ ಸಲ್ಮಾನ್‌ ಅವರು ನನ್ನ ಮದುವೆಯಾಗುವಂತೆ ಮನವೊಲಿಸಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ. ಅವರು ದೊಡ್ಡ ಕುಟುಂಬದವರಾಗಿದ್ದು ‘ಅದ್ದೂರಿ ಮದುವೆಯ ಬಗ್ಗೆ ಮಾತನಾಡಿ, ನನ್ನ ಮನವೊಲಿಸಲು ಪ್ರಯತ್ನಿಸಿದ್ದರು’ ಎಂದು ವಿಷಯವನ್ನು ನಿತ್ಯಾ ಮೆನನ್‌ ಬಹಿರಂಗಪಡಿಸಿದ್ದಾರೆ.

ನಿತ್ಯಾ ಮೆನನ್ ಹಾಗೂ ದುಲ್ಕರ್ ಸಲ್ಮಾನ್‌  ಬೆಂಗಳೂರು ಡೇಸ್, ಓಕೆ ಕಣ್ಮಣಿ, 100% ಲವ್‌ ಸಿನಿಮಾಗಳಲ್ಲಿ ತೆರೆಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾಗಳಲ್ಲಿನ ಇವರ ಕೆಮಿಸ್ಟ್ರೀ ಕೂಡ ಅಭಿಮಾನಿಗಳ ಮನಸೂರೆಗೊಂಡಿತ್ತು. ಮಣಿರತ್ನಂ ನಿರ್ದೇಶದ  ಓಕೆ ಕಣ್ಮಣಿ ಸಿನಿಮಾದಲ್ಲಿ ರೋಮ್ಯಾನ್ಸ್‌ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ದಂಪತಿಯಾಗಿ ಇಬ್ಬರು ಭಾವ ತುಂಬಿ ನಟಿಸಿದ್ದರು.

ಓಕೆ ಕಣ್ಮಣಿ ಸಿನಿಮಾವ ನೋಡಿದಾಗ ನಾನು ಆಶ್ಚರ್ಯಚಕಿತಳಾಗಿದ್ದೆ ಯಾಕೆಂದರೆ ಅದರಲ್ಲಿ ನಮ್ಮಿಬ್ಬರ ಕೆಮಿಸ್ಟ್ರೀ ಸಖತ್ ವರ್ಕೌಟ್‌ ಆಗಿತ್ತು ಎಂದು ನಿತ್ಯಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದೀಗ ನಿತ್ಯಾ ಮೆನನ್‌ ವೆಬ್‌ಸಿರೀಸ್‌ಗೂ ಎಂಟ್ರಿ ಕೊಟ್ಟಿದ್ದು ಬ್ರೀತ್ ಇನ್‌ ಶಾಡೋದಲ್ಲೂ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.