ಭಾನುವಾರ, ಜನವರಿ 26, 2020
18 °C

‘ಪಿಂಕ್’ ತೆಲುಗು ರಿಮೇಕ್‌ನಲ್ಲಿ ನಿವೇತಾ ಥಾಮಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಮಾಜದ ಪ್ರಭಾವಶಾಲಿ ವ್ಯಕ್ತಿಗಳು ನಡೆಸುವ ಲೈಂಗಿಕ ದೌರ್ಜನ್ಯದ ವಿರುದ್ಧ ಕಾನೂನು ಸಮರ ಸಾರುವ ಮೂವರು ಮಹಿಳೆಯರ ಕತೆ ಹೊಂದಿದ್ದ ಬಾಲಿವುಡ್‌ನ ‘ಪಿಂಕ್‌’ ಚಿತ್ರ ಇದೀಗ ತೆಲುಗು ಭಾಷೆಗೂ ರಿಮೇಕ್‌ ಆಗುತ್ತಿದೆ.

ಎಲ್ಲರ ಮೆಚ್ಚುಗೆ ಗಳಸಿದ್ದ ಅಮಿತಾಭ್ ಬಚ್ಚನ್‌ ಪಾತ್ರವನ್ನು ನಟ ಪವನ್‌ ಕಲ್ಯಾಣ್ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಈಗಾಗಲೇ ಖಚಿತವಾಗಿದೆ. ನಟಿ ತಾಪ್ಸಿ ಪನ್ನು ಪಾತ್ರಕ್ಕೆ ‘ನಿನ್ನು ಕೋರಿ’ ಖ್ಯಾತಿಯ ನಟಿ ನಿವೇತಾ ಥಾಮಸ್‌ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮೂವರು ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ವಕೀಲನ ಪಾತ್ರದಲ್ಲಿ ಅಮಿತಾಭ್‌ ನಟಿಸಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು