ಭಾನುವಾರ, ನವೆಂಬರ್ 27, 2022
27 °C

ಅಮೀರ್‌ ಖಾನ್‌ ಪುತ್ರಿ ಇರಾಗೆ ಫ್ರೆಂಚ್ ಕಿಸ್‌ ಕೊಟ್ಟು, ಉಂಗುರ ತೊಡಿಸಿದ ನೂಪುರ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ಅಮೀರ್‌ ಖಾನ್‌ ಪುತ್ರಿ ಇರಾ ಖಾನ್‌ ತಮ್ಮ ಬಹುಕಾಲದ ಗೆಳೆಯ ನೂಪುರ್‌ ಶಿಖಾರೆ ಜತೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.

ಸಾರ್ವಜನಿಕವಾಗಿ ಇರಾ ಖಾನ್‌ಗೆ ಫ್ರೆಂಚ್‌ ಕಿಸ್‌ ಕೊಟ್ಟು, ಉಂಗುರ ಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ಕಳೆದ ಮೂರು ವರ್ಷಗಳಿಂದ ಇರಾ ಹಾಗೂ ನೂಪುರ್ ಡೇಟಿಂಗ್‌ ಮಾಡುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಇವರು ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. 

‘ನೀನು ನನ್ನನ್ನು ಮದುವೆ ಆಗುತ್ತೀಯಾ’ ಎಂದು ಇರಾಗೆ ನೂಪುರ್‌ ಕೇಳುತ್ತಾರೆ. ಇದಕ್ಕೆ ಇರಾ 'ಯೆಸ್' ಎಂದು ಹೇಳುತ್ತಾರೆ. ನಂತರ ಇಬ್ಬರೂ ಫ್ರೆಂಚ್ ಕಿಸ್ ಮಾಡಿ ಆ ಕ್ಷಣವನ್ನು ಸಂಭ್ರಮಿಸಿದ್ದಾರೆ.

ಇರಾ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, 'ನಾನು ಇದಕ್ಕೆ ಒಪ್ಪಿಕೊಂಡಿರುವೆ' ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳು ಇರಾಗೆ ಶುಭಾಶಯಗಳನ್ನು ಹೇಳುತ್ತಿದ್ದಾರೆ.

ಇವನ್ನೂ ಓದಿ


ಪ್ರೀತಿಗೆ ಎರಡು ವರ್ಷದ ಸಂಭ್ರಮ: ಪ್ರಿಯಕರನ ಜತೆಗಿನ ಫೋಟೊ ಪೋಸ್ಟ್ ಮಾಡಿದ ಇರಾ ಖಾನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು