ಬುಧವಾರ, ಡಿಸೆಂಬರ್ 2, 2020
16 °C
ತೆಲುಗು ನಟರನ್ನು ಬಳಸಿ ಶೂಟಿಂಗ್‌: ಡಿಸೆಂಬರ್‌ ವೇಳೆಗೆ ಶೂಟಿಂಗ್‌ ಮುಕ್ತಾಯ

ಕನ್ನಡ– ತೆಲುಗು ಆವೃತ್ತಿಯಲ್ಲಿ ಓಲ್ಡ್‌ ಮಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡ– ತೆಲುಗಿನಲ್ಲೂ ಬರಲಿದೆ ‘ಓಲ್ಡ್‌ ಮಾಂಕ್‌’...

ಶ್ರೀನಿವಾಸ್‌ (ಶ್ರೀನಿ) ನಾಯಕ, ನಿರ್ದೇಶನದ ‘ಓಲ್ಡ್‌ ಮಾಂಕ್‌’ ಚಿತ್ರಕ್ಕೆ ತೆಲುಗಿನಲ್ಲೂ ಬೇಡಿಕೆ ಬಂದಿದೆ. ಹಾಗಾಗಿ ಇದು ದ್ವಿಭಾಷಾ ಚಿತ್ರವಾಗಿ ಹೊರಬರಲಿದೆ. 

ಹೀಗೆ ಚಿತ್ರದ ಸ್ವರೂಪವನ್ನು ವಿವರಿಸಿದರು ಶ್ರೀನಿವಾಸ್‌. 

‘ತೆಲುಗಿನಲ್ಲಿ ಕ್ಲಾಪ್‌ಬೋರ್ಡ್‌ ಪ್ರೊಡಕ್ಷನ್‌ನ ನಲ್ಲಂ ರಾಮಕೃಷ್ಣ‌ ಮತ್ತು ಸ್ಟಾರ್‌ವುಡ್‌ ಪ್ರೊಡಕ್ಷನ್‌ನ ರವಿ ಕಶ್ಯಪ್‌ ಅವರುಈ ಸಿನಿಮಾದ ಹಕ್ಕುಗಳನ್ನು ಪಡೆದಿದ್ದಾರೆ. ಹಾಗಾಗಿ ಶೂಟಿಂಗ್‌ ವೇಳೆಯಲ್ಲಿ ಕನ್ನಡ ಹಾಗೂ ತೆಲುಗು ನಟರನ್ನು ಸೇರಿಸಿಕೊಂಡು ಶೂಟಿಂಗ್‌ ಮಾಡುತ್ತಿದ್ದೇವೆ. ತೆಲುಗು ಪರಿಸರಕ್ಕೆ ಬೇಕಾದಂತೆ ಕೆಲವು ಭಾಗಗಳನ್ನು ತೆಲುಗು ನಟರನ್ನೇ ಬಳಸಿ ಚಿತ್ರಿಸಿದ್ದೇವೆ’ ಎಂದು ಶ್ರೀನಿ ವಿವರಿಸಿದರು. 

‘ತೆಲುಗು ಮತ್ತು ಕನ್ನಡದಲ್ಲಿ ಚಿರಪರಿಚಿತ ಮುಖಗಳನ್ನು ಚಿತ್ರದ ಅತಿಥಿ ಪಾತ್ರವಾಗಿ ತೋರಿಸುವ ಆಲೋಚನೆ ಇದೆ. ಅದಕ್ಕೂ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದ ಶ್ರೀನಿವಾಸ್‌, ಈಗಾಗಲೇ ಶೇ 70ರಷ್ಟು ಶೂಟಿಂಗ್‌ ಮುಗಿದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ ಒಳಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು. 

‘ಕನ್ನಡ ಹಾಗೂ ತೆಲುಗಿನಲ್ಲಿ ಹಲವು ಬಿಗ್‌ ಬಜೆಟ್‌ ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ. ಅವುಗಳ ಸಮಯ ನೋಡಿಕೊಂಡು, ಮಾರುಕಟ್ಟೆ ಅವಲೋಕಿಸಿ ಸಿನಿಮಾ ಬಿಡುಗಡೆ ಮಾಡುತ್ತೇವೆ. ಮುಂದಿನ ಏಪ್ರಿಲ್‌ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.

‘ಆರಂಭದಲ್ಲಿ ಚಿತ್ರ ನಿರ್ಮಾಣಕ್ಕೆ ₹ 3 ಕೋಟಿ ವೆಚ್ಚ ಅಂದಾಜಿಸಲಾಗಿತ್ತು. ಈಗ ತೆಲುಗುಭಾಗದ ಶೂಟಿಂಗ್‌ ಸಹ ಸೇರಿರುವುದರಿಂದ ಅದು ₹ 4 ಕೋಟಿವರೆಗೆ ತಲುಪಿದೆ’ ಎಂದರು.

ಚಿತ್ರದ ಹಕ್ಕುಗಳ ಮಾರಾಟದ ಮೌಲ್ಯದ ಬಗ್ಗೆ ಶ್ರೀನಿ ಗುಟ್ಟುಬಿಟ್ಟು ಕೊಡಲಿಲ್ಲ. 

‘ಇದೇ ತಂಡ ನಿರ್ಮಿಸಿದ 'ಬೀರ್‌ಬಲ್‌ʼ ಚಿತ್ರ ತೆಲುಗಿನಲ್ಲಿ ‘ತಿಮ್ಮರಸು’ ಹೆಸರಿನಲ್ಲಿ ರಿಮೇಕ್‌ ಆಗುತ್ತಿದೆ. ಅದರ ಕಾರಣದಿಂದಲೇ ಈಗ ‘ಓಲ್ಡ್‌ ಮಾಂಕ್’‌ಗೂ ಬೇಡಿಕೆ ಬಂದಿದೆ’ ಎಂದರು.  

 ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು