ಶನಿವಾರ, ಜುಲೈ 24, 2021
20 °C

‘ಅನಿರೀಕ್ಷಿತ’ ಅನ್‌ಲಾಕ್‌ ಹಾದಿಯಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎರಡು ಪಾತ್ರಗಳು ಒಂದೇ ಸ್ಥಳದಲ್ಲಿ ನಾಲ್ಕು ಸನ್ನಿವೇಶಗಳ (ಲೊಕೇಷನ್‌) ಚಿತ್ರೀಕರಣ. 13 ಜನರ ತಂಡದ ಪರಿಶ್ರಮ. ಲಾಕ್‌ಡೌನ್‌ ಸಮಯದಲ್ಲೇ ನಿರ್ಮಾಣ. ಇವೆಲ್ಲದರ ಒಟ್ಟು ಫಲವೇ ‘ಅನಿರೀಕ್ಷಿತ’. ಈ ‘ಅನಿರೀಕ್ಷಿತ’ ಚಿತ್ರಕ್ಕೆ ಕಥೆ ಬರೆದು ಆ್ಯಕ್ಷನ್‌ ಕಟ್‌ ಹೇಳಿದವರು ಮಿಮಿಕ್ರಿ ದಯಾನಂದ್‌. ನೆಳ್ಳುಳ್ಳಿ ರಾಜಶೇಖರನ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕೋವಿಡ್‌ ನಿರ್ಬಂಧಗಳು ಸರಿಹೋದ ಬಳಿಕ ಚಿತ್ರಮಂದಿರ ಹಾಗೂ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆ ಮಾಡಲು ಚಿತ್ರಂಡ ಸಿದ್ಧತೆ ಮಾಡಿದೆ.

ಜೀವನದ ಅನಿರೀಕ್ಷಿತ ತಿರುವುಗಳು ಬದುಕಿನ ಗತಿಯನ್ನೇ ಬದಲಿಸಿ, ಯಾರೂ ಕಲಿಸದ ಪಾಠವನ್ನು ಕಲಿಸಿಬಿಡುತ್ತವೆ. ಇಂತಹ ತಾತ್ವಿಕ ಎಳೆಯೊಂದು, ಕುತೂಹಲ ಹಿಡಿದಿಟ್ಟುಕೊಂಡು ಹೇಗೆ ಎಳೆಎಳೆಯಾಗಿ ರಹಸ್ಯ ಬಿಚ್ಚಿಕೊಳ್ಳುತ್ತ ಸಾಗುತ್ತದೆ ಎಂಬುದೇ ‘ಅನಿರೀಕ್ಷಿತ’ದ ಒಂದು ಎಳೆ.

ಚಿತ್ರದ ಪೋಸ್ಟರ್‌ನ್ನು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಬಿಡುಗಡೆ ಮಾಡಿದರು. ಶೀಘ್ರ ಟ್ರೇಲರ್‌ ಬಿಡುಗಡೆ ಆಗಲಿದೆ. ಎಸ್.ಕೆ.ಟಾಕೀಸ್ ಲಾಂಛನದಲ್ಲಿ ‌ಶಾಂತಕುಮಾರ್‌ ನಿರ್ಮಿಸಿರುವ ಈ‌ ಚಿತ್ರದ ಸಹ ನಿರ್ಮಾಪಕರು ಸಂತೋಷ್ ಕೊಡಂಕೇರಿ, ರಘು ಎಸ್ ಹಾಗೂ ಮಿಮಿಕ್ರಿ ದಯಾನಂದ್.‌ ಜೀವನ್ ಗೌಡ ಛಾಯಾಗ್ರಹಣ ಹಾಗೂ ರಘು ಅವರ ಸಂಕಲನ ಈ ಚಿತ್ರಕ್ಕಿದೆ.‌ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು