ಆಪರೇಶನ್ ಶೂಟಿಂಗ್ ಸಕ್ಸೆಸ್

7

ಆಪರೇಶನ್ ಶೂಟಿಂಗ್ ಸಕ್ಸೆಸ್

Published:
Updated:
Deccan Herald

ಫೈವ್‍ಸ್ಟಾರ್ ಸಂಸ್ಥೆಯ ಮೂಲಕ ನಂದಕುಮಾರ ಎನ್., ಅರವಿಂದ್‌ ಮೂರ್ತಿ ಟಿ.ಎಸ್., ರಾಧಾಕೃಷ್ಣ ಹಾಗೂ ಕಿಶೊರ್ ಮೇಗಳಮನೆ ಸೇರಿ ನಿರ್ಮಿಸಿರುತ್ತಿರುವ ‘ಆಪರೇಶನ್ ನಕ್ಷತ್ರ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಇದೀಗ ಮುಕ್ತಾಯಗೊಂಡಿದೆ.

ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಿಕೊಂಡಿರುವ ಚಿತ್ರತಂಡ ಉಳಿದ 2 ಹಾಡುಗಳನ್ನು ಇದೇ ತಿಂಗಳಲ್ಲಿ ಚಿತ್ರೀಕರಿಸಲಿದೆ. ಮಧುಸೂದನ್ ಅವರ ನಿರ್ದೇಶನದ ಮೊದಲ ಚಿತ್ರ ಇದು. ಇತ್ತೀಚೆಗಷ್ಟೇ ಶೀರ್ಷಿಕೆಯನ್ನು ಶ್ರೀಮುರುಳಿ ಬಿಡುಗಡೆ ಮಾಡಿದ್ದರು. ಮಧುಸೂದನ್‍ ಅವರೇ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದಾರೆ.

ಹಣದ ಹಿಂದೆ ಹೋದ ನಾಲ್ವರು ಹುಡುಗರ ಕಥೆ ಇದಾಗಿದ್ದು, ಕೊನೆಗೆ ಅವರ ಪರಿಸ್ಥಿತಿ ಏನಾಯಿತು ಎಂಬುದನ್ನು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕದೊಂದಿಗೆ ಹೇಳಲಾಗಿದೆಯಂತೆ.

ಈ ಚಿತ್ರಕ್ಕೆ ಶಿವಸೀನ ಅವರ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತವಿದೆ. ವಿಜಯ್ ಭರಮಸಾಗರ ಸಾಹಿತ್ಯ ಬರೆದಿದ್ದಾರೆ. ನಿರಂಜನ್ ಒಡೆಯರ್, ಅದಿತಿ ಪ್ರಭುದೇವ, ಯಜ್ಞಾ ಶೆಟ್ಟಿ, ಲಿಖಿತ್‍ಸೂರ್ಯ, ದೀಪಕ್‍ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮಿ, ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ ಟಿ.ಎಸ್, ಭರತ್ ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !