ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Oscars 2022: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಮಾಹಿತಿ...

Last Updated 28 ಮಾರ್ಚ್ 2022, 4:35 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್‌: ಪ್ರಸಕ್ತ ಸಾಲಿನ ಅಕಾಡೆಮಿ ಆಸ್ಕರ್‌ ಪ್ರಶಸ್ತಿಗಳು ಘೋಷಣೆಯಾಗಿವೆ. ಜಪಾನ್‌ನ 'ಡ್ರೈವ್ ಮೈ ಕಾರ್'ಗೆ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ.

‘ಡ್ಯೂನ್’ ಚಿತ್ರಕ್ಕೆ ಆರು ಆಸ್ಕರ್‌ ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಧ್ವನಿ ವಿನ್ಯಾಸ, ಅತ್ಯುತ್ತಮ ಸಂಕಲನ, ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್, ಅತ್ಯುತ್ತಮ ಛಾಯಾಗ್ರಹಣ ವಿಭಾಗಗಳಲ್ಲಿ ಡ್ಯೂನ್‌ ಚಿತ್ರಕ್ಕೆ ಪ್ರಶಸ್ತಿಗಳು ಸಿಕ್ಕಿವೆ.

'ಕೊಡ' ಚಿತ್ರದಲ್ಲಿನ ಅಭಿನಯಕ್ಕಾಗಿ 'ಟ್ರಾಯ್ ಕೊಟ್ಸೂರ್‌'ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ.

ಸ್ಟೀವನ್ ಸ್ಪೀಲ್‌ಬರ್ಗ್‌ ನಿರ್ದೇಶನದ 'ವೆಸ್ಟ್ ಸೈಡ್' ಚಿತ್ರದಲ್ಲಿನ ಅಭಿನಯಕ್ಕಾಗಿ 'ಅರಿಯಾನಾ ಡಿಬೋಸ್' ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಆಸ್ಕರ್‌ ಪ್ರಶಸ್ತಿಗೆ ಗಳಿಸಿದ ಚಿತ್ರ ಹಾಗೂ ಕಲಾವಿದರ ವಿವರ ಇಲ್ಲಿದೆ...

*ಅತ್ಯುತ್ತಮ ಚಿತ್ರ: ಕೊಡ
*ಅತ್ಯುತ್ತಮ ನಿರ್ದೇಶಕ: ಜೇನ್ ಕ್ಯಾಂಪಿಯನ್ (ದ ಪವರ್ ಆಫ್ ದಿ ಡಾಗ್)
*ಅತ್ಯುತ್ತಮ ನಟಿ: ಜೆಸ್ಸಿಕಾ ಚಸ್ಟೈನ್ (ದಿ ಐಸ್ ಆಫ್ ಟಾಮಿ ಫಾಯೆ)
*ಅತ್ಯುತ್ತಮ ನಟ: ವಿಲ್ ಸ್ಮಿತ್ (ಕಿಂಗ್ ರಿಚರ್ಡ್)
*ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ಡ್ರೈವ್ ಮೈ ಕಾರ್(ಜಪಾನ್‌)
*ಅತ್ಯುತ್ತಮ ಪೋಷಕ ನಟ: ಟ್ರಾಯ್ ಕೊಟ್ಸೂರ್‌(ಕೊಡ)
*ಅತ್ಯುತ್ತಮ ಪೋಷಕ ನಟಿ: ಅರಿಯಾನಾ ಡಿಬೋಸ್(ವೆಸ್ಟ್ ಸೈಡ್)
*ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ಡ್ಯೂನ್
*ಅತ್ಯುತ್ತಮ ಧ್ವನಿ ವಿನ್ಯಾಸ: ಡ್ಯೂನ್
*ಅತ್ಯುತ್ತಮ ಸಂಕಲನ: ಡ್ಯೂನ್
*ಅತ್ಯುತ್ತಮ ಛಾಯಾಗ್ರಹಣ: ಡ್ಯೂನ್
*ಅತ್ಯುತ್ತಮ ಮೂಲ ಚಿತ್ರಕಥೆ: ಬೆಲ್‌ಫಾಸ್ಟ್
*ಅತ್ಯುತ್ತಮ ಸಾಕ್ಷ್ಯಚಿತ್ರ: ಸಮ್ಮರ್ ಆಫ್ ಸೋಲ್
*ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಎನ್ಕಾಂಟೊ
*ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ದಿ ಕ್ವೀನ್ ಆಫ್ ಬಾಸ್ಕೆಟ್‌ಬಾಲ್
*ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ದಿ ವಿಂಡ್‌ಶೀಲ್ಡ್ ವೈಪರ್
*ಅತ್ಯುತ್ತಮ ಲೈವ್ ಆ್ಯಕ್ಷನ್ ಕಿರುಚಿತ್ರ: ದಿ ಲಾಂಗ್ ಗುಡ್‌ಬೈ
*ಅತ್ಯುತ್ತಮ ಹಾಡು: ನೋ ಟೈಮ್ ಟು ಡೈ (ನೋ ಟೈಮ್ ಟು ಡೈ)
*ಅತ್ಯುತ್ತಮ ಮೇಕಪ್&ಹೇರ್: ದಿ ಐಸ್ ಆಫ್ ಟಾಮಿ ಫಾಯೆ

ಅಕಾಡೆಮಿ-ಆಸ್ಕರ್‌ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದ್ದ ಚಿತ್ರಗಳು...

-‘ಬೆಲ್‌ಫಾಸ್ಟ್‌’
-‘ಕೊಡ’
-‘ಡೋಂಟ್‌ ಲುಕ್‌ ಅಪ್‌’
-‘ಡ್ರೈವ್‌ ಮೈ ಕಾರ್‌’
-‘ಡುನ್‌’
-‘ಕಿಂಗ್‌ ರಿಚರ್ಡ್‌’
-‘ಲೈಕೋರೈಸ್ ಪಿಜ್ಜಾ’
-‘ನೈಟ್‌ಮೇರ್‌ ಅಲಿ’
-‘ದಿ ಪವರ್‌ ಆಫ್‌ ದಿ ಡಾಗ್‌’
-‘ವೆಸ್ಟ್‌ ಸೈಡ್‌ ಸ್ಟೋರಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT