ಶನಿವಾರ, ಜುಲೈ 31, 2021
23 °C

ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ನಾನಿ, ರಾಮ್‌ಗೆ ಹೆಚ್ಚಿದ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಕ್ಷಯ್‌ ಕುಮಾರ್‌, ಅಜಯ್‌ ದೇವಗನ್‌ ಹಾಗೂ ಆಲಿಯಾ ಭಟ್‌ರಂತಹ ಬಾಲಿವುಡ್‌ನ ಖ್ಯಾತನಾಮರು ಒಟಿಟಿ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಕುರಿತು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈ ಮೂವರ ಸಿನಿಮಾಗಳು ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುತ್ತಿರುವುದು ಅಧೀಕೃತವಾಗಿದೆ.

ಅಕ್ಷಯ್‌ ಕುಮಾರ್‌ರಂತಹ ಎ ಸ್ಟಾರ್‌ ನಟ ಕೂಡ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಒಪ್ಪಿಗೆ ನೀಡಿರುವ ಕಾರಣ ಟಾಲಿವುಡ್‌ ನಟರ ಮೇಲೂ ಒತ್ತಡ ಹೆಚ್ಚುತ್ತಿದೆ.

ನ್ಯಾಚುಲರ್ ಸ್ಟಾರ್ ನಾನಿ ಅಭಿನಯದ ‘ವಿ’ ಹಾಗೂ ರಾಮ್‌ಪೋತಿನೇತಿ ಅಭಿನಯದ ‘ರೆಡ್’ ಸಿನಿಮಾಗಳ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ಮುಗಿದಿವೆ. ಅಲ್ಲದೇ ಈ ಸಿನಿಮಾಗಳು ಕ್ರಮವಾಗಿ ಮಾರ್ಚ್‌, ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಲಾಕ್‌ಡೌನ್‌ ಕಾರಣದಿಂದ ಸಿನಿಮಾ ಬಿಡುಗಡೆ ಸಾಧ್ಯವಾಗಿರಲಿಲ್ಲ.

ಆದರೆ ನಾನಿ ಹಾಗೂ ರಾಮ್ ಇಬ್ಬರೂ ತಮ್ಮ ನಿರ್ಮಾಪಕರ ನಿಲುವಾದ ಒಟಿಟಿ ಬಿಡುಗಡೆಗೆ ಒಪ್ಪಿಗೆ ಸೂಚಿಸಿಲ್ಲ ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ.

ನಾನಿ ಹಾಗೂ ರಾಮ್ ಇನ್ನೆರಡು ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಲಿದೆ ಎಂಬ ಭರವಸೆ ಹೊಂದಿದ್ದಾರೆ. ಆದರೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು ಸದ್ಯಕ್ಕೆ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಆ ಕಾರಣಕ್ಕೆ ನಿರ್ಮಾಪಕರು ಈ ಇಬ್ಬರು ನಟರ ಒಪ್ಪಿಗೆಗೆ ಕಾಯುತ್ತಿದ್ದಾರೆ.

ಡಿಜಿಟಲ್‌ ಹಕ್ಕು ಪಡೆಯಲು ಒಟಿಟಿ ಕಂಪನಿಗಳು ವಿ ಹಾಗೂ ರೆಡ್ ಸಿನಿಮಾಗಳಿಗೆ ಕ್ರಮವಾಗಿ ₹30 ಕೋಟಿ ಹಾಗೂ ₹22 ಕೋಟಿ ನೀಡುವುದಾಗಿದೆ ತಿಳಿಸಿವೆ. ಆ ಕಾರಣಕ್ಕೆ ನಿರ್ಮಾಪಕರು ಹೀರೊಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಷ್ಟು ದೊಡ್ಡ ಮೊತ್ತವನ್ನು ಒಟಿಟಿ ಕಂಪನಿಗಳು ನೀಡುತ್ತವಾ? ಎನ್ನುವುದು ಅನುಮಾನದ ಸಂಗತಿಯಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಿರ್ಮಾಪಕರು ಹೆಚ್ಚಿನ ಹಣ ಡಿಮ್ಯಾಂಡ್‌ ಮಾಡುವ ಪರಿಸ್ಥಿತಿಯಲ್ಲೂ ಇಲ್ಲ.

 ಟಾಲಿವುಡ್‌ನಲ್ಲಿ ಅನುಷ್ಕಾ ಅಭಿನಯದ ‘ನಿಶಬ್ಧಂ’, ರಾಜ್ ತರುಣ್ ಅಭಿನಯದ ‘ಒರೇ ಬುಜ್ಜಿಗಾ’, ನಾನಿ ಅಭಿನಯದ ’ವಿ’ ಹಾಗೂ ರಾಮ್ ಅಭಿನಯದ ’ರೆಡ್‌’ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್‌ ಕೆಲಸ ಕೂಡ ಮುಗಿದಿದ್ದು ಬಿಡುಗಡೆಗೆ ಸಿದ್ಧವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು