ಸೋಮವಾರ, ಜನವರಿ 20, 2020
27 °C

ಕಬಡ್ಡಿ ಕಲಿತ ಕಂಗನಾ: ದಾಖಲೆ ಬರೆದ 'ಪಂಗಾ' ಟ್ರೇಲರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ಗುಂಗುರು ಕೂದಲ ಸುಂದರಿ ಕಂಗನಾ ರನೋಟ್‌  ಅಭಿನಯಿಸಿರುವ ‘ಪಂಗಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಯುಟ್ಯೂಬ್‌ನಲ್ಲಿ ಸುಮಾರು 13 ಲಕ್ಷಕ್ಕೂ ಹೆಚ್ಚು ಹಿಟ್‌ ಪಡೆದುಕೊಂಡಿದೆ.  

ಟ್ರೇಲರ್ ಬಿಡುಗಡೆಯಾಗಿ 18 ಗಂಟೆಗಳಲ್ಲಿ ಸುಮಾರು 13 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು 3 ಲಕ್ಷ ಜನರು ಲೈಕ್‌ ಮಾಡಿದ್ದಾರೆ. ಕಂಗಾನ ಚಿತ್ರವೊಂದು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಹೆಚ್ಚು ವ್ಯೂ ಪಡೆದು ದಾಖಲೆ ಬರೆದ ಸಿನಿಮಾ ಇದಾಗಿದೆ. 

ಬದುಕಿನ ಸಣ್ಣ ಕದಲಿಕೆಗಳನ್ನೂ ರಸವತ್ತಾಗಿ ಕಟ್ಟಿಕೊಡುವ ಕಲೆಗಾರ್ತಿ ಅಶ್ವಿನಿ ಅಯ್ಯರ್‌ ತಿವಾರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಕಂಗನಾ ಕಬಡ್ಡಿ ಆಟದ ಪಟ್ಟು, ತಂತ್ರಗಾರಿಕೆಗಳನ್ನು ಕಲಿತು ಆ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಅಶ್ವಿನಿ ಹೇಳಿದ್ದಾರೆ. 

ಪಂಗಾ ಸಿನಿಮಾ ಹೊಸ ತಲೆಮಾರಿನ ಮಧ್ಯಮ ವರ್ಗದ ಒಂದು ಕುಟುಂಬದ ಕತೆಯನ್ನು ಹೇಳುತ್ತದೆ. ಈ ಕುಟುಂದಲ್ಲಿ ಕಬಡ್ಡಿ ಅಟಗಾರ್ತಿಯಾಗಬೇಕು ಎಂಬ ಕಂಗಾನ ಅವರ ಕನಸೇ ಚಿತ್ರದ ತಿರುಳು ಎಂದು ಅಶ್ವಿನಿ ಹೇಳಿದ್ದಾರೆ. 

ಪಂಗಾ ಸಿನಿಮಾವನ್ನು ಫಾಕ್ಸ್‌ ಸ್ಟಾರ್‌ ಹಿಂದಿ ನಿರ್ಮಾಣ ಮಾಡಿದೆ. ಜೆಸ್ಸಿ ಗಿಲ್‌, ನೀನಾ ಗುಪ್ತಾ, ರಿಚಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಬರುವ ಜನವರಿ 24ರಂದು ಸಿನಿಮಾ ತೆರೆಗೆ ಬರಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು