ಶುಕ್ರವಾರ, ಡಿಸೆಂಬರ್ 3, 2021
20 °C

ನೇಪಾಳದ ಪರ್ವತದಲ್ಲಿ ಧ್ಯಾನಕ್ಕೆ ಕುಳಿತ ಪರಿಣಿತಿ ಚೋಪ್ರಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Parineeti Chopra Instagram Post

ಬೆಂಗಳೂರು: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ, ಬಿಡುವಿನ ವೇಳೆಯಲ್ಲಿ ಪ್ರವಾಸ ಹೋಗುವುದು ಮತ್ತು ಹೊಸ ತಾಣಗಳ ಕುರಿತು ಫೋಟೊ ಪೋಸ್ಟ್ ಮಾಡುವುದು, ಅಭಿಮಾನಿಗಳಿಗೆ ವಿವರಣೆ ನೀಡುವುದನ್ನು ಮಾಡುತ್ತಿರುತ್ತಾರೆ.

ಅಲ್ಲದೆ, ಪ್ರಯಾಣ ಮತ್ತು ಪ್ರವಾಸದಲ್ಲಿರುವಾಗ, ಶೂಟಿಂಗ್‌ನಲ್ಲಿ ಬ್ಯುಸಿ ಇರುವಾಗ ಪರಿಣಿತಿ ಅವರು ಯೋಗ, ಧ್ಯಾನ ಮಾಡುವುದನ್ನು ತಪ್ಪಿಸಿಕೊಳ್ಳುವುದಿಲ್ಲವಂತೆ..

ಜತೆಗೆ ಜಿಮ್ ಹೋಗುವುದು ಮತ್ತು ವರ್ಕೌಟ್ ವಿಚಾರದಲ್ಲೂ ಪರಿಣಿತಿ ಕಟ್ಟುನಿಟ್ಟಿನ ದಿನಚರಿ ಪಾಲಿಸುತ್ತಾರೆ. ಪರಿಣಿತಿ ಸದ್ಯ ನೇಪಾಳದಲ್ಲಿ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಹಿಮಾಲಯದ ಪರ್ವತ ಶ್ರೇಣಿಯ ಹಿನ್ನೆಲೆ ಇರುವ ಸುಂದರ ತಾಣದಲ್ಲಿ ಶಾಂತಚಿತ್ತರಾಗಿ ಪರಿಣಿತಿ ಅವರು ಧ್ಯಾನ ಮಾಡುತ್ತಿದ್ದಾರೆ.

ಧ್ಯಾನ ಮಾಡುತ್ತಿರುವ ಚಿತ್ರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ದಿನವೂ ಧ್ಯಾನ ಮಾಡುವುದೇ ನನ್ನ ಸೀಕ್ರೆಟ್ ಎಂದು ಹೇಳಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು