ಬುಧವಾರ, ಮೇ 18, 2022
24 °C

ಸಮುದ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಪರಿಣಿತಿ ಚೋಪ್ರಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Parineeti Chopra Instagram Post

ಬೆಂಗಳೂರು: ಪ್ರವಾಸ ಹೋಗುವುದು ಎಂದರೆ ಎಲ್ಲರಿಗೂ ಇಷ್ಟವೇ.. ಅದರಲ್ಲೂ ನಗರ ಜೀವನದಲ್ಲಿ ಕಳೆದು ಹೋಗಿರುವವರು ಸಮುದ್ರ ತೀರಕ್ಕೆ ವಿಹಾರಕ್ಕೆ ಹೋದರಂತೂ ಅವರ ಖುಷಿ ಹೇಳತೀರದು.. ಇದೇ ಅನುಭವ ನಟಿ ಪರಿಣಿತಿ ಚೋಪ್ರಾ ಅವರಿಗೆ ಆಗಿದೆ.

ಪ್ರಿಯಾಂಕಾ ಚೋಪ್ರಾ ಸಹೋದರಿ ಪರಿಣಿತಿ ಚೋಪ್ರಾ, ನಾನು ಸಮುದ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನನಗೆ ಮತ್ತೆ ಅಲ್ಲಿಗೆ ಹೋಗಬೇಕೆನ್ನಿಸುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ, ಮಾಲ್ಡೀವ್ಸ್ ಕಡಲ ತೀರದಲ್ಲಿ ವಿಹರಿಸುತ್ತಿರುವ ಹಳೆಯ ಫೋಟೊ ಒಂದನ್ನು ಕೂಡ ಪರಿಣಿತಿ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಪರಿಣಿತಿ ಪೋಸ್ಟ್ ನೋಡಿರುವ ಸೈನಾ ನೆಹ್ವಾಲ್, ಖುಷಿಯ ಎಮೋಜಿ ಒಂದನ್ನು ಕಾಮೆಂಟ್ ಮಾಡಿದ್ದಾರೆ.

ಅಲ್ಲದೆ, ಪರಿಣಿತಿಯ ಫೋಟೊವನ್ನು ಎರಡು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು