ಶುಕ್ರವಾರ, ಸೆಪ್ಟೆಂಬರ್ 17, 2021
29 °C

50 ನೇ ಜನ್ಮದಿನದ ಸಂಭ್ರಮದಲ್ಲಿ ಪವನ್ ಕಲ್ಯಾಣ್, ಗಣ್ಯರಿಂದ ಶುಭಾಶಯ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ, ಟಾಲಿವುಡ್ ಪವರ್‌ಸ್ಟಾರ್ ಹಾಗೂ ರಾಜಕಾರಿಣಿ ಪವನ್ ಕಲ್ಯಾಣ ಅವರು ಸೆ. 2 ಕ್ಕೆ 50 ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ನಟ–ನಟಿಯರು ಹಾಗೂ ಅವರ ಅಭಿಮಾನಿಗಳು ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ನಟ ಹಾಗೂ ಪವನ್ ಕಲ್ಯಾಣ ಸಹೋದರ ಚಿರಂಜಿವಿ ಅವರು, ‘ನನ್ನ ತಮ್ಮ ಬಾಲ್ಯದಿಂದಲೂ ಸಮಾಜದ ಬಗ್ಗೆ ತುಡಿತ ಹೊಂದಿರುವವ. ಒಂದು ಕ್ಷಣದ ಒಳಿತಿಗೆ ಹತ್ತು ಕ್ಷಣ ಉರಿಯುವ ಸೂರ್ಯನಾಗುವ. ತನ್ನ ಗುರಿ ಈಡೇರಿಕೆಗೆ ಯಾವಾಗಲು ಪ್ರಮಾಣಿಕವಾಗಿ ಪ್ರಯತ್ನಿಸುವ ಕಲ್ಯಾಣಗೆ ನನ್ನ ಶುಭಾಶಯಗಳು‘ ಎಂದು ಟ್ವೀಟ್ ಮಾಡಿದ್ದಾರೆ.

 

ನಟ ಅಲ್ಲು ಅರ್ಜುನ್ ಸೇರಿದಂತೆ ಅನೇಕ ನಟ–ನಟಿಯರು ಪವರ್‌ ಸ್ಟಾರ್‌ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಪವನ್ ಕಲ್ಯಾಣ್ ಅವರು ಇತ್ತೀಚೆಗಷ್ಟೇ ವಕೀಲ್ ಸಾಬ್ ಮೂಲಕ ಸದ್ದು ಮಾಡಿದ್ದರು. ಇದೀಗ ಅವರ ನಟನೆಯ ‘ಬೀಮಾಲ್ ನಾಯಕ್‘ ಹಾಗೂ ‘ಹರಿ ಹರ ವೀರ ಮಲ್ಲು‘ ಸಿನಿಮಾಗಳು ನಿರ್ಮಾಣದ ಹಂತದಲ್ಲಿವೆ. ನಿನ್ನೆಯಷ್ಟೇ ‘ಭೀಮಾಲ್ ನಾಯಕ್‘ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.

 

ಪವನ್ ಕಲ್ಯಾಣ ಅವರು ಕೇವಲ ನಟನೆಯಷ್ಟೇ ಅಲ್ಲದೇ ನಿರ್ದೇಶನ, ಚಿತ್ರಕಥೆ, ನೃತ್ಯ ಸಂಯೋಜನೆ, ಹಿನ್ನೆಲೆ ಗಾಯನ, ಸಾಹಸ ನಿರ್ದೇಶನದಲ್ಲೂ ಛಾಪು ಮೂಡಿಸಿದ್ದಾರೆ. ಸಾಮಾಜಿಕ ಚಿಂತಕರೂ ಆಗಿರುವ ಇವರು 2014 ರಲ್ಲಿ ತಮ್ಮದೇಯಾದ ‘ಜನ ಸೇನಾ ಪಾರ್ಟಿ‘ಯ ಮೂಲಕ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ್ದಾರೆ.

 

1996 ರಲ್ಲಿ ಅಕ್ಕಡ ಅಮ್ಮಾಯಿ ಇಕ್ಕಡ ಇಮ್ಮಾಯಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪವನ್ ಕಲ್ಯಾಣ ಹಿಂತಿರುಗಿ ನೋಡಿದ್ದೇ ಇಲ್ಲ ಅಂದಿನಿಂದ ಇಂದಿನವರೆಗೂ 26 ಸಿನಿಮಾಗಳಲ್ಲಿ ಅಭಿನಯಿಸಿ, ಹಲವು ಚಿತ್ರಗಳಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಒಂದೇ ಫ್ರೇಮ್‌ನಲ್ಲಿ ಚಿರಂಜೀವಿ– ಪವನ್ ಕಲ್ಯಾಣ್; ಇದು ‘ಸ್ಮರಣೀಯ ದಿನ’ ಎಂದ ಚರಣ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು