ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#BoycottRRR | ಚಿತ್ರಮಂದಿರಗಳ ಮಾಲೀಕರ ಮನವೊಲಿಕೆ ಯತ್ನ: ಕೆವಿಎನ್‌ ಸಂಸ್ಥೆ

Last Updated 23 ಮಾರ್ಚ್ 2022, 11:08 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿಆರ್‌ಆರ್‌ಆರ್‌ ಚಿತ್ರವನ್ನು ಬಹಿಷ್ಕರಿಸಿ ಎಂಬ ಕೂಗು ಕೇಳಿಬಂದಿರುವ ಬೆನ್ನಲೇ ಚಿತ್ರಮಂದಿರಗಳ ಮಾಲೀಕರ ಮನವೊಲಿಕೆ ಮಾಡುವುದಾಗಿ ಕೆವಿಎನ್‌ ಸಂಸ್ಥೆ ತಿಳಿಸಿದೆ.

ಹೆಚ್ಚಿನ ಚಿತ್ರಮಂದಿರಗಳಲ್ಲಿ ಆರ್‌ಆರ್‌ಆರ್ ಕನ್ನಡ ಅವತರಣಿಕೆಯ ಪ್ರದರ್ಶನವೇಕಿಲ್ಲ ಎನ್ನುವ ಜನರ ಪ್ರಶ್ನೆಗೆ, ಚಿತ್ರಮಂದಿರದ ಮಾಲೀಕರೇ ಇದಕ್ಕೆ ಕಾರಣ ಎನ್ನುವ ಅಭಿಪ್ರಾಯವನ್ನುಚಿತ್ರ ವಿತರಕರಾದ ಕೆವಿಎನ್‌ ಪ್ರೊಡಕ್ಷನ್ಸ್‌ ನೀಡಿದೆ.

‘ರಾಜ್ಯದಲ್ಲಿ ಆರ್‌ಆರ್‌ಆರ್‌ ಸಿನಿಮಾವಿತರಣೆಯ ಹಕ್ಕನ್ನು ಪಡೆದುಕೊಂಡಿರುವಕೆವಿಎನ್‌ ಸಂಸ್ಥೆ, ಆರ್‌ಆರ್‌ಆರ್‌ ಸಿನಿಮಾದ ಕನ್ನಡ ಅವತರಣಿಕೆಯನ್ನು ಪ್ರದರ್ಶಿಸಲು ಹಿಂದೇಟು ಹಾಕುತ್ತಿರುವ ಚಿತ್ರಮಂದಿರಗಳ ಮಾಲೀಕರ ಮನವೊಲಿಸುವ ಕಾರ್ಯ ನಡೆಯುತ್ತಿದೆ‘ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ನಟರಾದ ರಾಮ್‌ಚರಣ್‌, ಜೂನಿಯರ್‌ ಎನ್‌ಟಿಆರ್‌ ಅವರು ಕನ್ನಡ ಕಲಿಯಲು ವಿಶೇಷ ಪ್ರಯತ್ನಗಳನ್ನು ಮಾಡಿ ಮೊದಲ ಬಾರಿಗೆ ತಮ್ಮದೇ ಧ್ವನಿಯಲ್ಲಿ ಚಿತ್ರಕ್ಕೆ ಡಬ್‌ ಮಾಡಿದ್ದಾರೆ. ನೀವು ಕನ್ನಡ ಭಾಷೆಯಲ್ಲೇ ಈ ಸಿನಿಮಾ ನೋಡಲು ಇಷ್ಟಪಡುತ್ತೀರಿ ಎಂದು ನಾವು ಭಾವಿಸಿದ್ದೇವೆ. ಆದ್ದರಿಂದ, ಸಿನಿಮಾ ಪ್ರದರ್ಶಿಸಲು ಹಿಂದೇಟು ಹಾಕುತ್ತಿರುವ ಚಿತ್ರಮಂದಿರಗಳ ಮಾಲೀಕರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ‘ ಎಂದು ಕೆವಿಎನ್‌ ಸಂಸ್ಥೆ ಹೇಳಿದೆ.

‘ಕನ್ನಡ ಆವೃತ್ತಿಯ ಸಿನಿಮಾವನ್ನು ಹೆಚ್ಚಿನ ಪರದೆಗಳಲ್ಲಿ ಬಿಡುಗಡೆ ಮಾಡಲು ಎಲ್ಲ ಪ್ರಯತ್ನಗಳನ್ನು ನಾವು ಸತತವಾಗಿ ಮಾಡುತ್ತಿದ್ದೇವೆ. ಈ ಬಗ್ಗೆ ನಾಳೆ (ಮಾ.24)ಯೊಳಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ‘ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT