ಮಂಗಳವಾರ, ಜೂಲೈ 7, 2020
28 °C

ಮೂರನೇ ಮದುವೆಯಾದ ನಟಿ ವನಿತಾಗೆ ಎದುರಾಯ್ತು ಆಪತ್ತು?

. Updated:

ಅಕ್ಷರ ಗಾತ್ರ : | |

Prajavani

ನಟಿ ವನಿತಾ ವಿಜಯ್‌ಕುಮಾರ್‌ ಮತ್ತು ವಿಎಫ್‌ಎಕ್ಸ್‌ ಟೆಕ್ನಿಷಿಯನ್‌ ಪೀಟ್‌ ಪಾಲ್‌ ಕಳೆದ ಶನಿವಾರ ಸಪ್ತಪದಿ ತುಳಿದಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ವನಿತಾ ತಮ್ಮ ಇಬ್ಬರು ಪುತ್ರಿಯರಾದ ಜೋವಿಕಾ ಮತ್ತು ಜಯ್ನಿತಾ ಎದುರೇ ಮೂರನೇ ಮದುವೆಯಾಗಿದ್ದು, ದೊಡ್ಡ ಸುದ್ದಿಯಾಗಿತ್ತು. ಈ ವಿವಾಹದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಉಂಟು.

ವನಿತಾ ಮೊದಲಿಗೆ ಕಿರುತೆರೆ ನಟ ಆಕಾಶ್‌ ಜೊತೆಗೆ ಸಪ್ತಪದಿ ತುಳಿದಿದ್ದರು. ಆಕಾಶ್‌ ಜೊತೆಗಿನ ಸಂಬಂಧ ಮುರಿದುಹೋದ ಬಳಿಕ ಉದ್ಯಮಿ ಆನಂದ ಜಯರಾಜನ್‌ ಅವರನ್ನು ಮರುಮದುವೆಯಾಗಿದ್ದರು. ಬಳಿಕ ಪೀಟ್‌ ಪಾಲ್‌ ಜೊತೆಗಿನ ಹಲವು ವರ್ಷಗಳ ಸ್ನೇಹ ಇಬ್ಬರ ಮದುವೆಯ ಹಂತಕ್ಕೆ ತಂದು ನಿಲ್ಲಿಸಿತ್ತು. ಈ ಇಬ್ಬರ ವಿವಾಹ ಈಗ ಪೊಲೀಸ್ ಠಾಣೆಯ‌ ಮೆಟ್ಟಿಲು ಹತ್ತಿದೆ.

ಅಂದಹಾಗೆ ಪೀಟ್‌ ಪಾಲ್‌ಗೆ ಇದು ಎರಡನೇ ಮದುವೆ. ಅವರ ಮೊದಲ ಪತ್ನಿ ಎಲಿಜಬೆತ್‌ ಹೆಲೆನ್, ತನ್ನ ಗಂಡ ನನಗೆ ವಿಚ್ಛೇದನ ನೀಡದೆ ಮರುಮದುವೆಯಾಗಿದ್ದಾರೆ ಎಂದು ವಡಪಲಾನಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೀಟ್‌ ಪಾಲ್‌ ಮತ್ತು ಎಲಿಜಬೆತ್‌ ಹೆಲೆನ್ ಕಳೆದ ಏಳು ವರ್ಷದಿಂದಲೂ ಪರಸ್ಪರ ಬೇರೆಯಾಗಿ ಸಂಸಾರ ನಡೆಸುತ್ತಿದ್ದಾರಂತೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಈ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ವನಿತಾ, ‘ಪೀಟ್‌ ಪಾಲ್‌ ಮತ್ತು ಹೆಲೆನ್‌ ಅವರ ಮೊದಲ ಮದುವೆ ಬಗ್ಗೆ ನನಗೂ ಗೊತ್ತಿದೆ. ಆಕೆಗೆ ಹೆಚ್ಚುವರಿ ಹಣ ಬೇಕಿದೆ. ಪೀಟ್‌ ಪಾಲ್ ಮುಂದೆ ₹ 1 ಕೋಟಿಗಾಗಿ ಬೇಡಿಕೆ ಇಡುತ್ತಿದ್ದಾಳೆ. ಅವರು ಒಳ್ಳೆಯ ವ್ಯಕ್ತಿ. ಕಾನೂನಾತ್ಮಕವಾಗಿ ನಾವಿಬ್ಬರು ಹೋರಾಟ ನಡೆಸುತ್ತೇವೆ’ ಎಂದಿದ್ದಾರೆ.

ಕಮಲಹಾಸನ್‌ ನಡೆಸಿಕೊಟ್ಟ ತಮಿಳಿನ ಬಿಗ್‌ಬಾಸ್ ಸೀಸನ್‌ 3ನಲ್ಲಿ ವನಿತಾ ಸ್ಪರ್ಧಿಯಾಗಿದ್ದರು. ಈ ರಿಯಾಲಿಟಿ ಶೋ ಬಳಿಕ ಅವರು ಹೆಚ್ಚು ಜನಪ್ರಿಯರಾದರು. ಆ ನಂತರ ಆಕೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ  ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು