ಮಂಗಳವಾರ, ಆಗಸ್ಟ್ 3, 2021
21 °C

‘ಪೆಟ್ಟಾ’ ಸಿನಿಮಾ: ರಜನಿಯಿಂದಲೇ ಡಬ್‌ ಮಾಡಿಸಲು ಯತ್ನ –ವಿತರಕ ಜಾಕ್‌ ಮಂಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಜನಿಕಾಂತ್ ಅಭಿನಯದ ಪೆಟ್ಟಾ ಸಿನಿಮಾವನ್ನು ರಜನಿ ಅವರಿಂದಲೇ ಕನ್ನಡದಲ್ಲಿ ಡಬ್ ಮಾಡಿ‌ಸಿ, ಬಿಡುಗಡೆ ಮಾಡುವ ವಿಚಾರವಾಗಿ ಸನ್ ಪಿಕ್ಚರ್ಸ್ ಸಂಸ್ಥೆ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ನಿರ್ಮಾಪಕ ಹಾಗೂ ವಿತರಕ ಜಾಕ್‌ ಮಂಜು ತಿಳಿಸಿದರು.

'ಚಿತ್ರವನ್ನು ರಜನಿ ಅವರೇ ಕನ್ನಡದಲ್ಲಿ ಡಬ್‌ ಮಾಡಿದರೆ ನಾನು ಬಿಡುಗಡೆ ಮಾಡುತ್ತೇನೆ' ಎಂದು ಅವರು ತಿಳಿಸಿದರು.

'ರಜನಿ ಅವರಿಗೆ ಕನ್ನಡ ಚೆನ್ನಾಗಿ ಗೊತ್ತು. ಅವರ ಮಾತಿನ ಶೈಲಿ ಹಲವರಿಗೆ ಇಷ್ಟವಾಗುತ್ತದೆ. ಹಾಗಾಗಿ ಅವರೇ ಡಬ್ ಮಾಡಬೇಕು ಎಂಬುದು ನನ್ನ ಆಸೆ. ಈ‌ ವಿಚಾರದಲ್ಲಿ ನಾನು ಆಶಾವಾದಿ ಆಗಿದ್ದೇನೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಡಬ್ ಮಾಡಿರುವ ಸಿನಿಮಾಗಳನ್ನು‌ ಕನ್ನಡದಲ್ಲಿ ಬಿಡುಗಡೆ‌ ಮಾಡಲು ಈಗ ವಿರೋಧ‌ ಇಲ್ಲ. ಡಬ್ ಸಿನಿಮಾಗಳನ್ನು ಬಿಡುಗಡೆ‌ ಮಾಡಲು ನಾನು ಸಿದ್ಧನಿದ್ದೇನೆ. ನಾವಿಲ್ಲಿ ವಾಣಿಜ್ಯ ವಹಿವಾಟು ನಡೆಸುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಜನಿ ಅಭಿನಯದ ಪೆಟ್ಟಾ ಸಿನಿಮಾದ ತಮಿಳು, ಹಿಂದಿ ಮತ್ತು ತೆಲುಗು ಅವತರಣಿಕೆಗಳು ಗುರುವಾರ ಬಿಡುಗಡೆ ಆಗಲಿವೆ. ಕನ್ನಡದಲ್ಲಿ ಅದು ಡಬ್ ಆದರೆ, ಒಂದೆರಡು ವಾರಗಳ ನಂತರ ಬಿಡುಗಡೆ ಆಗಲಿದೆ ಎಂದರು.

ಇದನ್ನೂ ಓದಿ...

ಕಾಳಿಯಾಗಿ ಆರ್ಭಟಿಸುತ್ತಿದ್ದಾರೆ ಸೂಪರ್ ಸ್ಟಾರ್ ‘ರಜನಿಕಾಂತ್’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು