ಕಿಚ್ಚ ಸುದೀಪ್ ನಟನೆಯ ಅನೂಪ್ ಭಂಡಾರಿ ನಿರ್ದೇಶನ ಫ್ಯಾಂಟಮ್ ಸಿನಿಮಾದ ಮೇಲೆ ಕುತೂಹಲ ಹೆಚ್ಚುತ್ತಲೇ ಇದೆ. ಜನವರಿ 21ಕ್ಕೆ ಸಿನಿಮಾ ಕುರಿತು ಮಹತ್ವದ ಅಪ್‌ಡೇಟ್‌ವೊಂದು ಹೊರ ಬೀಳಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಸುದೀಪ್. ಈಗ ಅದೇನೆಂಬುದು ಬಹಿರಂಗವಾಗಿದೆ.

ಫ್ಯಾಂಟಮ್ ಚಿತ್ರ ಶೀರ್ಷಿಕೆಯನ್ನು ವಿಕ್ರಾಂತ್ ರೋಣ ಎಂದು ಬದಲಿಸಲಾಗಿದೆ. ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರು ವಿಕ್ರಾಂತ್ ರೋಣ. ಆ ಹೆಸರನ್ನೇ ಸಿನಿಮಾಕ್ಕೂ ಇರಿಸಲಾಗಿದೆ. 2ನೇ ವಿಷಯ ಎಂದರೆ ಜನವರಿ 31ರಂದು ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ರದ ಲೋಗೊ ಹಾಗೂ ಟೀಸರ್ ಬಿಡುಗಡೆಯಾಗಲಿದೆ.

ಮೂಲಗಳ ಪ್ರಕಾರ ಈ ಸಿನಿಮಾ ಹಲವು ಪ್ರಥಮಗಳಿಗೆ ಕಾರಣವಾಗಲಿದೆ. ಅದೇನೆಂದರೆ ವಿಶ್ವದಲ್ಲೇ ಮೊದಲ ಬಾರಿಗೆ ಬುರ್ಜ್ ಖಲೀಫಾದಲ್ಲಿ ಲೋಗೊ, ಟೀಸರ್ ಬಿಡುಗಡೆ ಆಗಲಿರುವ ಚಿತ್ರ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ವಿಕ್ರಾಂತ್ ರೋಣ. ಅಲ್ಲದೇ ಸುದೀಪ್ ಅವರ 2000 ಅಡಿ ಕಟೌಟ್ ಅನ್ನು ನಿಲ್ಲಿಸಲಾಗುತ್ತದೆ. ಅಲ್ಲದೇ ಬುರ್ಜ್‌ನಲ್ಲಿ 180ಸ್ಕ್ರೀನ್‌ನಲ್ಲಿ ಕಾರ್ಯಕ್ರಮದ ಲೈವ್ ವಿಡಿಯೊ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಲೈವ್ ಭಾರತದಲ್ಲೂ ಪ್ರಸಾರವಾಗಲಿದೆ.

ಸುದೀಪ್ ಅವರ ಸಾಮಾಜಿಕ ಜಾಲತಾಣಗಳ ಪುಟದಲ್ಲೂ ಈ ಲೈವ್ ಕಾರ್ಯಕ್ರಮ ನೋಡಬಹುದಾಗಿದೆ. ಸಿನಿಮಾ ಶೀರ್ಷಿಕೆಯ ಬದಲಾವಣೆಯ ಕಾರಣವನ್ನು ಜನವರಿ 24 ರಂದು ಬಹಿರಂಗ ಪಡಿಸಲಿದ್ದಾರೆ ಅನೂಪ್. ವಿಕ್ರಾಂತ್ ರೋಣವನ್ನು ಶಾಲಿನಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಸಿದ್ದು ಮೂಲಿಮನಿ ಸೇರಿದಂತೆ ಖ್ಯಾತ ನಟ, ನಟಿಯರು ಬಣ್ಣ ಹಚ್ಚಿದ್ದಾರೆ. ಹೈದರಾಬಾದ್ ಹಾಗೂ ಕೇರಳದಲ್ಲಿ ಸಿನಿಮಾದ ಶೂಟಿಂಗ್ ನಡೆದಿತ್ತು. ಸಿನಿಮಾದ ಕೆಲವು ಹಾಡಿನ ಭಾಗದ ಶೂಟಿಂಗ್ ಮಾತ್ರ ಬಾಕಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.