ಬೆಂಗಳೂರು: ನಟ ಕಿಚ್ಚ ಸುದೀಪ್ ನಟನೆಯ ಮತ್ತು ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ‘ಫ್ಯಾಂಟಮ್’ ಚಿತ್ರದ ಚಿತ್ರೀಕರಣ ಸೋಮವಾರದಿಂದ ಆರಂಭವಾಗಿದೆ.

ಸುದೀಪ್ ಎದುರು ಕುಳಿತುಕೊಂಡು ಚಿತ್ರದ ಮೊದಲ ಶಾಟ್ನ ಸ್ಕ್ರಿಪ್ಟ್ ತಯಾರಿಸುತ್ತಿರುವ ಫೋಟೊ ಒಂದನ್ನು ಅನೂಪ್ ಟ್ವೀಟ್ ಮಾಡಿ, ಅಭಿಮಾನಿಗಳ ಜತೆಗೆ ಖುಷಿ ಹಂಚಿಕೊಂಡಿದ್ದಾರೆ.

‘ಕಂಠೀರವ ಸ್ಟುಡಿಯೊದಲ್ಲಿ ಫೋಟೊ ಶೂಟ್ ಮತ್ತು ಪ್ರೋಮೊ ಶೂಟ್ ಅಮೋಘವಾಗಿ ನಡೆಯಿತು. ಚಿತ್ರೀಕರಣ ಸೋಮವಾರದಿಂದ ಪ್ರಾರಂಭವಾಗಲಿದ್ದು, ಚಿತ್ರತಂಡ ಮತ್ತು ನಾನು ಸಹ ಅತ್ಯಂತ ಉತ್ಸಹಭರಿತರಾಗಿದ್ದೇವೆ. ಈ ಚಿತ್ರದಲ್ಲಿ ನಟಿಸುವ ಎಲ್ಲ ನಟರು, ತಂತ್ರಜ್ಞರ ತಂಡಕ್ಕೆ ಹಾಗೂ ಚಿತ್ರತಂಡಕ್ಕೆ ಶುಭವಾಗಲಿ’ ಎಂದು ನಟ ಕಿಚ್ಚ ಭಾನುವಾರವಷ್ಟೇ ಟ್ವೀಟ್ ಮಾಡಿದ್ದರು.

‘ಸುದೀಪ್ ಹಾಗೂ ನಾನು ‘ಬಿಲ್ಲ ರಂಗ ಬಾಷಾ’ ಚಿತ್ರಕ್ಕೂಮುನ್ನ ಶಾಲಿನಿ ಆರ್ಟ್ಸ್ ನಿರ್ಮಾಣದಲ್ಲಿ ಮತ್ತೊಂದು ಅದ್ದೂರಿ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದೇವೆ. ಈ ಚಿತ್ರದ ಶೀರ್ಷಿಕೆ, ತಾರಾಗಣ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹ ಸದಾ ಇರಲಿ’ ಎಂದು ಅನೂಪ್ ಇತ್ತೀಚೆಗೆ ಸಾಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡು, ‘ಫ್ಯಾಂಟಮ್’ ಬಗ್ಗೆ ಕುತೂಹಲದ ಬೀಜ ಬಿತ್ತಿದ್ದರು. ಚಿತ್ರತಂಡಚಿತ್ರದ ಶೀರ್ಷಿಕೆಯನ್ನು ಅಧಿಕೃತವಾಗಿ ಪ್ರಕಟಿಸುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ‘ಫ್ಯಾಂಟಮ್’ ಶೀರ್ಷಿಕೆ ವೈರಲ್ ಆಗಿತ್ತು.

ಈ ಚಿತ್ರದಲ್ಲಿ ಸುದೀಪ್ಗೆ ಜೋಡಿಯಾಗಿ ನಟಿಸಲಿರುವ ನಟಿ ಯಾರೆನ್ನುವ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.ದಕ್ಷಿಣ ಭಾರತದ ಚಿತ್ರರಂಗದಲ್ಲಿಮುಂಚೂಣಿಯಲ್ಲಿರುವ ಮೂರುನಾಲ್ಕು ನಟಿಯರ ಹೆಸರು ಪರಿಶೀಲನೆಯಲ್ಲಿದ್ದು, ನಾಯಕಿಯ ಆಯ್ಕೆ ಇನ್ನು ಅಂತಿಮಗೊಂಡಿಲ್ಲ. ಎರಡನೇ ಹಂತದ ಚಿತ್ರೀಕರಣ ಶುರುವಾಗುವ ವೇಳೆಗೆ ನಾಯಕಿಯ ಹೆಸರು ಪ್ರಕಟಿಸುವ ನಿರೀಕ್ಷೆ ಇದೆ ಎನ್ನುತ್ತವೆ ಚಿತ್ರತಂಡದ ಮೂಲಗಳು.

ಇನ್ನು ಕಿಚ್ಚ ನಟಿಸಿರುವ‘ಕೋಟಿಗೊಬ್ಬ-3’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಮೇ 1ರಂದು ಕಾರ್ಮಿಕರ ದಿನದ ಪ್ರಯುಕ್ತ ಚಿತ್ರವನ್ನು ತೆರೆಗೆ ತರುವ ಸಿದ್ಧತೆಯಲ್ಲಿ ನಿರ್ದೇಶಕ ಶಿವಕಾರ್ತಿಕ್ ಮತ್ತು ನಿರ್ಮಾಪಕ ಸೂರಪ್ ಬಾಬು ತೊಡಗಿದ್ದಾರೆ. ಮೇ 1ರಂದು ತೆರೆಕಂಡಿದ್ದ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಚಿಂದಿ ಉಡಾಯಿಸಿರುವ ನಿದರ್ಶನವಿರುವುದರಿಂದ ಆ ದಿನವೇ ‘ಕೋಟಿಗೊಬ್ಬ 3’ ತೆರೆಕಾಣಿಸಿ ಯಶಸ್ಸು ಬಾಚಿಕೊಳ್ಳುವುದು ಚಿತ್ರತಂಡದ ಲೆಕ್ಕಾಚಾರವಾಗಿದೆಯಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.