ಒಬ್ಬ ನಟನನ್ನಾಗಿ ನನ್ನನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ನಾಲ್ಕು ತಿಂಗಳು ಈ ಸೆಟ್‌ಗಾಗಿ ಶ್ರಮ ಹಾಕಲಾಗಿದೆ. ಕಳೆದ 32 ದಿನದಿಂದ ಇಲ್ಲಿ ಚಿತ್ರೀಕರಣ ನಡೆದಿದೆ. ದಿನಕ್ಕೆ ನಾಲ್ಕು ಕ್ಯಾಮೆರಾಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ನನ್ನ ಮಗನೂ ಇದರಲ್ಲಿ ನಟಿಸಿದ್ದಾನೆ. ‘ಪಿನಾಕ’ನಾಗಿ ಬಹಳ ರೋಮಾಂಚನವಾಗಿದೆ. ಇದು ನನ್ನ ಸಿನಿಪಯಣದಲ್ಲೇ ಭಿನ್ನವಾದ ಸಿನಿಮಾ ಆಗುತ್ತದೆ ಎನ್ನುವ ವಿಶ್ವಾಸವಿದೆ.