ಮಂಗಳವಾರ, ನವೆಂಬರ್ 19, 2019
29 °C

ಪೈರೆಸಿಯಿಂದ ಕುಗ್ಗಿಲ್ಲ: ಸ್ವಪ್ನಾ ಕೃಷ್ಣ

Published:
Updated:

ಬೆಂಗಳೂರು: ಪೈಲ್ವಾನ್ ಚಿತ್ರ ಸಾಮಾಜಿಕ ಜಾಲತಾಣಗಳ ಮೂಲಕ ಪೈರೆಸಿ ಆಗಿದ್ದರೂ, ಚಿತ್ರ ಮಂದಿರಗಳ ಮೂಲಕ ಆಗುತ್ತಿರುವ ಗಳಿಕೆಗೆ ಕುತ್ತು ಬಂದಿಲ್ಲ.

‘ಚಿತ್ರ ಪೈರೆಸಿ ಪಿಡುಗಿಗೆ ತುತ್ತಾಗಿದೆಯಾದರೂ, ಚಿತ್ರಮಂದಿರಗಳಿಂದ ಬರುತ್ತಿರುವ ಆದಾಯ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಆಗಿಲ್ಲ’ ಎಂದು ಚಿತ್ರದ ನಿರ್ಮಾಪಕಿ ಸ್ವಪ್ನಾ ಕೃಷ್ಣ ಹೇಳಿದರು.

ಇದನ್ನೂ ಓದಿ: ‘ಪೈಲ್ವಾನ್‌’ ಪೈರಸಿ: ಮತ್ತೊಬ್ಬನ ಬಂಧನ

‘ಪೈರೆಸಿ ಆಗಿರದಿದ್ದರೆ ಇನ್ನೂ ಹೆಚ್ಚಿನ ಜನ ಈ ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳಿಗೆ ಬರುತ್ತಿದ್ದರಲ್ಲವೇ’ ಎಂಬ ಪ್ರಶ್ನೆಯನ್ನು ಅವರ ಮುಂದೆ ಇರಿಸಿದಾಗ, ‘ಆ ಆಯಾಮದಲ್ಲಿ ಆಲೋಚಿಸಿಲ್ಲ. ಆದರೆ ನಾನು ಪೈರೆಸಿಯಿಂದ ಕುಗ್ಗಿಹೋಗಿಲ್ಲ’ ಎಂದು ಉತ್ತರಿಸಿದರು.

‘ಒಳ್ಳೆಯ ಸಿನಿಮಾ ನೀಡಿದಾಗ ಜನ ಕೈಹಿಡಿಯುತ್ತಾರೆ ಎಂಬ ಮಾತಿನಲ್ಲಿ ನನಗೆ ನಂಬಿಕೆ ಇದೆ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)