ಸೋಮವಾರ, ಅಕ್ಟೋಬರ್ 21, 2019
21 °C

ಅ. 24ಕ್ಕೆ ‘ಪೊಗರು’ ಡೈಲಾಗ್‌ ಟ್ರೇಲರ್‌ ಬಿಡುಗಡೆ

Published:
Updated:
Prajavani

ನಂದ ಕಿಶೋರ್‌ ನಿರ್ದೇಶನದ ಧ್ರುವ ಸರ್ಜಾ ನಾಯಕನಾಗಿರುವ ‘ಪೊಗರು’ ಚಂದನವನದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿರುವ ಚಿತ್ರ.  ಈಗಾಗಲೇ, ಚಿತ್ರದ ಶೇಕಡ 90ರಷ್ಟು ಚಿತ್ರೀಕರಣ ‍ಪೂರ್ಣಗೊಂಡಿದೆ. ಅಂದಹಾಗೆ ಅಕ್ಟೋಬರ್‌ 24ರಂದು ಚಿತ್ರದ ಡೈಲಾಗ್‌ ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಇದು ಧ್ರುವ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ಧ್ರುವ ಸರ್ಜಾ ನಟನೆಯ ಮೂರೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ಕೊಯ್ದಿವೆ. ಹಾಗಾಗಿ, ಈ ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಿಸಿರುವುದು ಸಹಜ. ಚಿತ್ರದಲ್ಲಿ ತಾಯಿ ಮತ್ತು ಮಗನ ಕಥೆ ಹೆಣೆಯಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ 24ರಂದು ಜನರ ಮುಂದೆ ಬರುವ ಇರಾದೆ ಚಿತ್ರತಂಡದ್ದು. ಒಂದು ವೇಳೆ ಈ ದಿನಾಂಕದಂದು ಬಿಡುಗಡೆ ಸಾಧ್ಯವಾಗದಿದ್ದರೆ ಸಂಕ್ರಾಂತಿ ಹಬ್ಬದಂದು ಚಿತ್ರ ತೆರೆ ಕಾಣಲಿದೆ ಎನ್ನುವುದು ಚಿತ್ರತಂಡದ ಭರವಸೆ.

ರಶ್ಮಿಕಾ ಮಂದಣ್ಣ ಅವರು ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ. ‘ಡಾಲಿ’ ಖ್ಯಾತಿಯ ಧನಂಜಯ್‌ ಅವರದು ಚಿತ್ರದಲ್ಲಿ ವಿಲನ್‌ ಪಾತ್ರ. ಅಂತರರಾಷ್ಟ್ರೀಯ ಖ್ಯಾತಿಯ ಬಾಡಿಬಿಲ್ಡರ್‌ಗಳ ಜೊತೆಗೆ ಅವರು ಧ್ರುವ ಎದುರು ತೊಡೆತಟ್ಟಿದ್ದಾರಂತೆ. ಬಿ.ಕೆ. ಗಂಗಾಧರ್ ಬಂಡವಾಳ ಹೂಡಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. 

Post Comments (+)