ಬುಧವಾರ, ಜನವರಿ 29, 2020
29 °C

ಪೊನ್ನಿಯಿನ್‌ ಸೆಲ್ವನ್‌ಜಯರಾಮ ಹೊಸ ಲುಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಕನಸಿನ ಸಿನಿಮಾವಾಗಿರುವ ‘ಪೊನ್ನಿಯಿನ್ ಸೆಲ್ವನ್‌’ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ‘ಪೊನ್ನಿಯಿನ್ ಸೆಲ್ವನ್‌’ ಕಾದಂಬರಿಯನ್ನು ಆ ಹೆಸರಿನಲ್ಲಿಯೇ ಸಿನಿಮಾ ಮಾಡುತ್ತಿದ್ದಾರೆ ಮಣಿರತ್ನಂ.

ಈ  ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್‌ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್‌, ಕಾಲಿವುಡ್‌, ಮಾಲಿವುಡ್‌, ಟಾಲಿವುಡ್‌ನ ಅನೇಕ ಜನಪ್ರಿಯ ನಟ, ನಟಿಯರು ನಟಿಸುತ್ತಿದ್ದಾರೆ. ವಿಕ್ರಮ್‌, ಕಾರ್ತಿ, ಸೇರಿದಂತೆ ಬಹುತೇಕ ಜನರು ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಈಗಾಗಲೇ ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಥಾಯ್ಲೆಂಡ್‌ನಲ್ಲಿ ಮುಗಿದಿದೆ. ಜಯಂ ರವಿ, ಐಶ್ವರ್ಯಾ ಲಕ್ಷ್ಮೀ ಅದರಲ್ಲಿ ಪಾಲ್ಗೊಂಡಿದ್ದರು. ಮಲಯಾಳಂನ ಖ್ಯಾತ ನಟ ಜಯರಾಮ್‌ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಅವರ ಅಭಿನಯದ ಕೆಲ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ತಲೆಗೆ ಟೋಪಿ ಹಾಕಿಕೊಂಡಿರುವ ಅವರು ಹೊಸ ಲುಕ್‌ನಲ್ಲಿ ಕಾಣುತ್ತಿದ್ದಾರೆ. ಈ ಪೌರಾಣಿಕ ಚಿತ್ರದಲ್ಲಿ ಅವರು ಅಝ್ವಕಿದಯರ್‌ ನಂಬಿ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡುತ್ತಿದೆ. ಎ.ಆರ್‌. ರೆಹಮಾನ್‌ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ: ಮಣಿರತ್ನಂ ಸಿನಿಮಾದಲ್ಲಿ ಐಶ್ವರ್ಯಾ ರೈ ದ್ವಿಪಾತ್ರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು