ಬೆಂಗಳೂರು: ನಟಿ ಪೂಜಾ ಹೆಗ್ಡೆ ಇಂದು 31 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತೆಲುಗಿನ ಸೂಪರ್ಹಿಟ್ ‘ಅಲಾವೈಕುಂಠಪುರಂಲು’ಸಿನಿಮಾ ನಂತರ ಅವರಿಗೆ ಸಾಲು ಸಾಲು ಸಿನಿಮಾಗಳು ಅರಸಿ ಬರುತ್ತಿವೆ.

ಸದ್ಯ ಜನವರಿ 14 ಕ್ಕೆ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್'ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಪಾತ್ರ ಇಂದು ರಿವೀಲ್ ಆಗಿದೆ.

ಬಹುನಿರೀಕ್ಷಿತ, ವಿಭಿನ್ನ ಪ್ರೇಮ ಕಥಾ ಹಂದರವುಳ್ಳ ‘ರಾಧೆ ಶ್ಯಾಮ್’ನಲ್ಲಿ ಪೂಜಾ ಹೆಗ್ಡೆ 'ಪ್ರೇರಣಾ'ಆಗಿ ಅಭಿನಯಿಸಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆ ‘ಯುವಿ ಕ್ರಿಯೇಷನ್ಸ್’ ಟ್ವಿಟರ್ನಲ್ಲಿ ಪೂಜಾ ಹೆಗ್ಡೆಗೆ ಜನ್ಮದಿನದ ಶುಭಾಶಯ ಕೋರಿ, ಅವರ ಆಕರ್ಷಕ ಪೋಸ್ಟರ್ ಬಿಡುಗಡೆ ಮಾಡಿದೆ.

ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಆಕ್ಷ್ಯನ್ ಕಟ್ ಹೇಳಿದ್ದು, ಈ ಚಿತ್ರವನ್ನು ಗೋಪಿ ಕೃಷ್ಣ ಮೂವೀಸ್, ಯುವಿ ಕ್ರಿಯೇಷನ್ಸ್ ಮತ್ತು ಟಿ ಸಿರೀಸ್ ನಿರ್ಮಿಸುತ್ತಿದೆ. ಸಚಿನ್ ಖೇಡೇಕರ್, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರ್ಲಿ ಶರ್ಮಾ, ಕುನಾಲ್ ರಾಯ್ ಕಪೂರ್, ರಿದ್ದಿ ಕುಮಾರ್, ಸಶಾ ಛೆಟ್ರಿ, ಸತ್ಯನ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಉಡುಪಿ ಮೂಲದ ಪೂಜಾ ಹೆಗ್ಡೆ 1990 ಅಕ್ಟೋಬರ್ 13 ರಂದು ಮುಂಬೈನಲ್ಲಿ ಜನಿಸಿದ್ದು, 2012 ರಲ್ಲಿ ‘ಮುಗಮುದಿ’ ತಮಿಳು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಾಲಿವುಡ್ನಲ್ಲಿ ಹೃತಿಕ್ ರೋಷನ್ ಜೊತೆಗೆ ‘ಮೆಹಂಜೊದಾರೋ’ ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದರು. ಇಲ್ಲಿವರೆಗೆ 12 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಉಳಿದಂತೆ ತೆಲುಗಿನ ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್', ‘ಆಚಾರ್ಯ್', ‘ಸರ್ಕಸ್' ಹಾಗೂ ‘ಬೀಸ್ಟ್' ಸಿನಿಮಾಗಳಲ್ಲಿ ಸದ್ಯಕ್ಕೆ ಪೂಜಾ ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.