ಗುರುವಾರ , ಏಪ್ರಿಲ್ 15, 2021
19 °C
ದೊಡ್ಡ ಗಾಜನೂರಿನಲ್ಲಿ ಪುನೀತ್‌ ರಾಜ್‌ಕುಮಾರ್‌, ಚಿತ್ರೀಕರಣದಲ್ಲಿ ಭಾಗಿ

ತಂದೆ ಡಾ.ರಾಜ್‌ ಹುಟ್ಟೂರಲ್ಲಿ ‘ಪವರ್‌ಸ್ಟಾರ್‌’ ಪುನೀತ್‌ ರಾಜ್‌ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕನ್ನಡದ ಖ್ಯಾತ ನಟ ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಅವರು ಗುರುವಾರ ತಮ್ಮ ತಂದೆ ಡಾ.ರಾಜ್‌ಕುಮಾರ್‌ ಅವರ ಹುಟ್ಟೂರು, ತಾಳವಾಡಿ ಸಮೀಪದ ದೊಡ್ಡ ಗಾಜನೂರಿನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡರು.  

ತಮ್ಮದೇ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ನಿರ್ಮಿಸಲಾಗುತ್ತಿರುವ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿ ಮೂರು ದಿನಗಳಿಂದ ತೊಡಗಿದ್ದ ಅವರು ಗುರುವಾರ ತಂದೆಯ ಹುಟ್ಟಿದ ಮನೆ, ಅವರು ಓಡಾಡಿದ ಜಾಗಗಳಿಗೆ ಭೇಟಿ ನೀಡಿದರು. 

ದೊಡ್ಡ ಗಾಜನೂರಿನಲ್ಲಿರುವ ಡಾ.ರಾಜ್‌ ಅವರು ಹುಟ್ಟಿರುವ ಮನೆ, ಗಾಜನೂರಿಗೆ ಬಂದಾಗಲೆಲ್ಲ ರಾಜ್‌ಕುಮಾರ್‌ ಅವರು ಭೇಟಿ ನೀಡುತ್ತಿದ್ದ ಜಮೀನಿನಲ್ಲಿರುವ ದೊಡ್ಡ ಆಲದಮರದ ಬಳಿಗೆ ತೆರಳಿ ಸಮಯ ಕಳೆದರು.


ಸೋದರತ್ತೆ ನಾಗಮ್ಮ ಅವರೊಂದಿಗೆ ಪುನೀತ್‌

ಪುನೀತ್‌ ಅವರು ಬಂದಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ, ಸುತ್ತಮುತ್ತಲಿನ ಜನರು ಅವರ ಮನೆಯ ಮುಂದೆ ನೆರೆದರು. ಮನೆಯಿಂದ ಬಂದ ಪುನೀತ್‌, ಅವರೊಂದಿಗೂ ಬೆರೆತರು. ಅಭಿಮಾನಿಗಳು, ಸೆಲ್ಫಿ, ಫೋಟೊಗೆ ಮುಗಿಬಿದ್ದರು. ಚಾಮರಾಜನಗರದಿಂದಲೂ ಹೋಗಿದ್ದ ಕೆಲವು ಅಭಿಮಾನಿಗಳು ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು. 

ಪುನೀತ್‌ ರಾಜ್‌ಕುಮಾರ್‌ ಅವರು ದೊಡ್ಡ ಗಾಜನೂರು ಭೇಟಿಯ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಂಗಳವಾರದಿಂದ ಇಲ್ಲೇ ವಾಸ್ತವ್ಯ ಹೂಡಿದ್ದ ಪುನೀತ್‌ ರಾಜ್‌ಕುಮಾರ್‌ ಅವರು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು, ಬೂಡಿಪಡಗ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ವನ್ಯಜೀವಿಗಳ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗಿದೆ. ಚಿತ್ರೀಕರಣಕ್ಕಾಗಿ ಅರಣ್ಯ ಇಲಾಖೆ ಅನುಮತಿಯನ್ನೂ ನೀಡಿತ್ತು.


ಡಾ.ರಾಜ್‌ ಕುಮಾರ್‌ ಅವರು ಇಷ್ಟಪಡುತ್ತಿದ್ದ ದೊಡ್ಡ ಆಲದ ಮರದ ಬುಡದಲ್ಲಿ ‘ಪವರ್‌ ಸ್ಟಾರ್‌’

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು