ಇನ್‌ಸ್ಟಾಗ್ರಾಂನಲ್ಲಿ ಇನ್ನು ಪ್ರಭಾಸ್‌

ಶುಕ್ರವಾರ, ಏಪ್ರಿಲ್ 19, 2019
22 °C

ಇನ್‌ಸ್ಟಾಗ್ರಾಂನಲ್ಲಿ ಇನ್ನು ಪ್ರಭಾಸ್‌

Published:
Updated:
Prajavani

‘ಸಾಹೊ’ ಪ್ರಭಾಸ್‌ಗೆ ಸೋಷಿಯಲ್‌ ಮೀಡಿಯಾ ಅಂದರೆ ಅಲರ್ಜಿ. ಆದರೆ ಅವರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ದೈನಂದಿನ ಚಟುವಟಿಕೆಗಳ ಹೈಲೈಟ್‌ಗಳನ್ನು ಅದೇ ವೇದಿಕೆಯಲ್ಲಿ ನೋಡುವಾಸೆ. ಹಾಗಾಗಿ, ಫೋಟೊ ಶೇರಿಂಗ್‌ ಮಾಧ್ಯಮವಾದ ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆಯುವಂತೆ ಪೀಡಿಸುತ್ತಲೇ ಇದ್ದಾರೆ.

‘ಸಾಹೊ’ ಚಿತ್ರ ತಂಡ ಆಗಾಗ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಫೋಟೊಗಳಿಗೆ ಲೈಕ್‌, ಕಮೆಂಟ್ ಮಾಡುವಾಗಲೂ ಹೆಚ್ಚಿನವರು ಪ್ರಭಾಸ್‌ಗೆ ಪರಾಕ್‌ ಹೇಳುವುದು ಸಾಮಾನ್ಯ. ಇದೀಗ, ಪ್ರಭಾಸ್‌ ಕೊನೆಗೂ ಮನಸ್ಸು ಬದಲಾಯಿಸಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ ತಮ್ಮದೊಂದು ಖಾತೆ ತೆರೆದು ತಮ್ಮ ಅಭಿಮಾನಿಗಳಿಗಾಗಿ ಫೋಟೊ ಹಂಚಿಕೊಳ್ಳಲು ಅವರು ಒಪ್ಪಿಕೊಂಡಿದ್ದಾರೆ. ನಾಚಿಕೆ ಸ್ವಭಾವದ ಈ ‘ಬಾಹುಬಲಿ’ ಇನ್ನಾದರೂ ತಮ್ಮ ಖಾಸಗಿ ಬದುಕಿನ ಝಲಕ್‌ಗಳನ್ನು ಎಲ್ಲರ ಮುಂದೆ ತೆರೆದಿಡುತ್ತಾರೋ ಕಾದು ನೋಡಬೇಕಿದೆ. 

‘ಬಾಹುಬಲಿ’ಗಾಗಿ ಐದು ವರ್ಷಗಳನ್ನು ಮುಡಿಪಾಗಿಟ್ಟ ಪ್ರಭಾಸ್‌, ‘ಸಾಹೊ’ದಲ್ಲಿ ಕಳೆದೊಂದು ವರ್ಷದೊಂದ ತೊಡಗಿಸಿಕೊಂಡಿದ್ದಾರೆ. ಈ ಚಿತ್ರ ಇದೇ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಪ್ರಭಾಸ್‌ ಜೋಡಿಯಾಗಿ ಶ್ರದ್ಧಾ ಕಪೂರ್‌ ನಟಿಸಿದ್ದು, ಜಾಕಿ ಶ್ರಾಫ್‌, ನೀಲ್‌ ನಿತಿನ್‌ ಮುಖೇಶ್‌, ಮಂದಿರಾ ಬೇಡಿ, ಚುಂಕಿ ಪಾಂಡೆ, ಮಹೇಶ್ ಮಂಜ್ರೇಕರ್‌, ಅರುಣ್‌ ವಿಜಯ್, ಮುರಳಿ ಶರ್ಮ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿಶ್ವವಿಖ್ಯಾತ ಸಂಗೀತ ನಿರ್ದೇಶಕ ಜೋಡಿ ಶಂಕರ್‌–ಎಹ್ಸಾನ್‌ ‘ಸಾಹೊ’ಗೆ ಸಂಗೀತ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !