ಭಾನುವಾರ, ಸೆಪ್ಟೆಂಬರ್ 26, 2021
25 °C

ಡೆವಿಲ್‌ ಈಸ್‌ ಬ್ಯಾಕ್‌: ಶಸ್ತ್ರಚಿಕಿತ್ಸೆ ಬಳಿಕ ನಟ ಪ್ರಕಾಶ್‌ ರಾಜ್‌ ಟ್ವೀಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿತ್ರೀಕರಣದ ವೇಳೆ ಕುಸಿದು ಬಿದ್ದು ಗಾಯಗೊಂಡಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್‌ ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಈ ಬಗ್ಗೆ ಬುಧವಾರ ಟ್ವೀಟ್‌ ಮೂಲಕ ಚಿತ್ರವೊಂದನ್ನು ಹಂಚಿಕೊಂಡಿರುವ ಅವರು, 'ಮತ್ತೆ ಮರಳಿದ ದೈತ್ಯ... ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಆತ್ಮೀಯ ಸ್ನೇಹಿತರಾದ ಡಾ.ಗುರುವಾ ರೆಡ್ಡಿ ಅವರಿಗೆ ಧನ್ಯವಾದಗಳು. ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದಗಳು. ಆದಷ್ಟು ಬೇಗನೇ ಕೆಲಸಕ್ಕೆ ಮರಳುವೆ' ಎಂದು ತಿಳಿಸಿದ್ದಾರೆ.

ಚೆನ್ನೈನಲ್ಲಿ ನಟ ಧನುಷ್ ಅಭಿನಯದ #D44 ಚಿತ್ರೀಕರಣದ ವೇಳೆ ಪ್ರಕಾಶ್ ರಾಜ್‌ ಅವರು ಕುಸಿದು ಬಿದ್ದು ಗಾಯಗೊಂಡಿದ್ದರು. ಭುಜಕ್ಕೆ ಏಟಾಗಿದ್ದರಿಂದ ಹೈದರಾಬಾದ್‌ನಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು