ಪ್ರಣಮ್ ದೇವರಾಜ್ ನಟನೆಯ ಹೊಸ ಸಿನಿಮಾಕ್ಕೆ ‘ಎಂ.ಜಿ.ಆರ್’ ಎಂದು ಹೆಸರಿಡಲಾಗಿದೆ. ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಅನಾವರಣಗೊಂಡಿದ್ದು, ಈ ಚಿತ್ರದ ಮೂಲಕ ನಟ ಪ್ರಜ್ವಲ್ ದೇವರಾಜ್ ನಿರ್ಮಾಪಕರಾಗುತ್ತಿದ್ದಾರೆ.

ಈ ಹಿಂದೆ ಪ್ರಣಮ್ಗೆ ‘s/o ಮುತ್ತಣ್ಣ’ ಚಿತ್ರ ನಿರ್ದೇಶಿಸಿದ್ದ ಶ್ರೀಕಾಂತ್ ಹುಣಸೂರು ಅವರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

‘ತುಂಬ ಸಂತಸದ ಕ್ಷಣವಿದು. ನಾನು ಚಿತ್ರರಂಗಕ್ಕೆ ಬಂದು 30 ವರ್ಷಗಳ ಬಳಿಕ ನಿರ್ಮಾಪಕನಾದೆ. ಪ್ರಜ್ವಲ್ ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳಲ್ಲಿಯೇ ನಿರ್ಮಾಪಕನಾಗುತ್ತಿದ್ದಾನೆ. ಕಲಾವಿದರಾದ ನಮಗೆ ಬೇರೆ ವ್ಯಾಪಾರ, ಆಲೋಚನೆ ಕಡಿಮೆ. ಏನೇ ಮಾಡಿದರೂ ಸಿನಿಮಾದತ್ತಲೇ ಯೋಚನೆ ಹೊರಳುತ್ತದೆ. ಚಿತ್ರರಂಗಕ್ಕೆ ಸೇವೆ ಮಾಡುವುದು ಒಳ್ಳೆಯ ವಿಷಯ. ಈ ನಿರ್ಮಾಣ ಸಂಸ್ಥೆ ಒಳ್ಳೆಯ ಅಭಿರುಚಿಯ ಸಿನಿಮಾಗಳನ್ನು ನೀಡಲಿ. ಪ್ರಣಮ್ ಮೊದಲ ಬಾರಿಗೆ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಈ ಚಿತ್ರದ ತಾಂತ್ರಿಕ ವರ್ಗ ಸಮರ್ಥವಾಗಿದೆ. ಹೀಗಾಗಿ ಉತ್ತಮ ಸಿನಿಮಾ ಹೊರಬರಲಿದೆ ಎಂಬ ವಿಶ್ವಾಸವಿದೆ’ ಎಂದರು ನಟ ದೇವರಾಜ್.

ಚಿತ್ರಕ್ಕೆ ಚರಣ್ರಾಜ್ ಸಂಗೀತ ನಿರ್ದೇಶನವಿದೆ. ಸ್ಕೇಟಿಂಗ್ ಕೃಷ್ಣ ಅವರ ಛಾಯಾಚಿತ್ರಗ್ರಹಣ, ಶ್ರೀನಿವಾಸ್ ಪಿ.ಬಾಬು ಸಂಕಲನವಿದೆ. ಪುರಾತನ ಫಿಲ್ಮ್ಸ್ ಹಾಗೂ ಡೈನಾಮಿಕ್ ವೆಂಚರ್ಸ್ ಬಂಡವಾಳ ಹೂಡುತ್ತಿವೆ.

‘ಶೀರ್ಷಿಕೆ ಕುರಿತು ಕುತೂಹಲ ಇದ್ದೇ ಇರುತ್ತೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ. ಪ್ರಣಮ್ ಅವರಲ್ಲಿ ನಟನೆಯ ಸಾಮರ್ಥ್ಯವಿದೆ. ಹೀಗಾಗಿ ಅವರ ಇನ್ನೊಂದು ಮುಖವನ್ನು ತೋರಿಸುವ ಯತ್ನ. ಸಂಪೂರ್ಣ ಮಾಸ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದರು ನಿರ್ದೇಶಕ.

‘2005ರಲ್ಲಿ ನಡೆವಂಥ ಕಥೆಯಿದು. ಯುಗಾದಿ ವೇಳೆಗೆ ಮುಹೂರ್ತ ಮಾಡುತ್ತಿದ್ದೇವೆ. ನಮ್ಮ ಬ್ಯಾನರ್ ಮೂಲಕ ಹೊಸ ಪ್ರತಿಭೆಗಳಿಗೂ ಅವಕಾಶ ನೀಡುತ್ತೇವೆ’ ಎಂದರು ಪ್ರಜ್ವಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.