ನಿರ್ದೇಶಕ ಪ್ರಶಾಂತ್ ನೀಲ್ ‘ಕೆಜಿಎಫ್ ಚಾಪ್ಟರ್ 2’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಾಪ್ಟರ್ 1 ಚಿತ್ರದ ಯಶಸ್ಸಿನ ಬಳಿಕ ಎರಡನೇ ಅಧ್ಯಾಯದ ಕಥೆಯ ಮೇಲೂ ಮತ್ತಷ್ಟು ಕುತೂಹಲ ಗರಿಗೆದರಿರುವುದು ಗುಟ್ಟೇನಲ್ಲ. ಅಕ್ಟೋಬರ್ನಲ್ಲಿ ಈ ಚಿತ್ರದ ಬಿಡುಗಡೆಗೆ ಹೊಂಬಾಳೆ ಫಿಲ್ಮ್ಸ್ ಸಿದ್ಧತೆ ನಡೆಸಿದೆ.

ಈ ಚಿತ್ರದ ಬಳಿಕ ಪ್ರಶಾಂತ್ ನೀಲ್ ಅವರು, ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ ನಟನೆಯ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದು ಪಕ್ಕಾ ಆಗಿದೆ. ಸೈಂಟಿಫಿಕ್ ಆ್ಯಕ್ಷನ್ ಚಿತ್ರ ಇದು. ಪ್ರಸ್ತುತ ಎನ್ಟಿಆರ್, ಎಸ್.ಎಸ್. ರಾಜಮೌಳಿ ನಿರ್ದೇಶನದ ಬಿಗ್ ಬಜೆಟ್ ಚಿತ್ರ ‘ಆರ್ಆರ್ಆರ್’ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರಿಗೆ ಐರಿಸ್ ಚೆಲುವೆ ಒಲಿವಿಯಾ ಮೊರಿಸ್ ಜೋಡಿ. ಇದರ ಶೂಟಿಂಗ್ಗೂ ಕೋವಿಡ್–19 ಬಿಸಿ ತಟ್ಟಿದೆ. ಕೊರೊನಾ ತಹಬಂದಿಗೆ ಬಂದರೆ ಈ ವರ್ಷವೇ ಚಿತ್ರೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

‘ಆರ್ಆರ್ಆರ್’ ಚಿತ್ರದ ಬಳಿಕ 2021ರ ಮಧ್ಯಾಂತರದಲ್ಲಿ ತ್ರಿವಿಕ್ರಮ್ ನಿರ್ದೇಶನದ ಹೊಸ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ನಟಿಸಲಿದ್ದಾರೆ. ಹಾಗಾಗಿ, ಪ್ರಶಾಂತ್ ನೀಲ್ ಅವರ ಹೊಸ ಚಿತ್ರದಲ್ಲಿ ಎನ್ಟಿಆರ್ ನಟಿಸುವುದು ಯಾವಾಗ ಎಂಬುದು ಅವರ ಅಭಿಮಾನಿಗಳ ಪ್ರಶ್ನೆ.

ಈಗಾಗಲೇ, ಜೂನಿಯರ್ ಎನ್ಟಿಆರ್ ಅವರಿಗೆ ಪ್ರಶಾಂತ್ ಹೊಸ ಸಿನಿಮಾದ ಕಥೆಯನ್ನು ನಿರೂಪಿಸಿದ್ದಾರೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನಡಿ ಇದರ ಕಥೆ ಹೆಣೆದಿದ್ದಾರಂತೆ. 2022ರಲ್ಲಿ ಈ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ. ಅದೇ ವರ್ಷ ಚಿತ್ರೀಕರಣ ಆರಂಭಿಸಿದರೆ 2023ರ ವೇಳೆಗೆ ಥಿಯೇಟರ್ಗೆ ಬರುವ ನಿರೀಕ್ಷೆಯಿದೆ.

ಮೈತ್ರಿ ಮೂವಿ ಮೇಕರ್ಸ್ ಇದಕ್ಕೆ ₹ 200 ಕೋಟಿ ಬಂಡವಾಳ ಹೂಡಲು ಮುಂದಾಗಿದೆ. ಈ ಪ್ರೊಡಕ್ಷನ್ಸ್ನಡಿ ಇಲ್ಲಿಯವರೆಗೆ ಅತಿಹೆಚ್ಚು ಬಂಡವಾಳ ಹೂಡುತ್ತಿರುವ ಚಿತ್ರವೂ ಇದಾಗಿದೆ. ಇದರಲ್ಲಿ ಜೂನಿಯರ್ ಎನ್ಟಿಆರ್ಗೆ ಯಾರು ನಾಯಕಿಯಾಗಲಿದ್ದಾರೆ ಎಂಬ ಕುತೂಹಲವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.