ಮಂಗಳವಾರ, ನವೆಂಬರ್ 19, 2019
29 °C

ಮತ್ತೆ ಮೋಡಿಗೆ ಸಜ್ಜಾದ ಸಂಜು– ಜಾಕಿ

Published:
Updated:
Prajavani

ಸಂಜಯ್‌ ದತ್‌ ಅಭಿನಯದ ‘ಪ್ರಸ್ಥಾನಂ’ ಚಿತ್ರದ ಮುಖ್ಯಪಾತ್ರವೊಂದರಲ್ಲಿ ಹಿರಿಯ ನಟ ಜಾಕಿಶ್ರಾಫ್‌ ಅಭಿನಯಿಸಿದ್ದು, 19 ವರ್ಷಗಳ ನಂತರ ಇವರಿಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. 

‘ಪ್ರಸ್ಥಾನಂ’ ಚಿತ್ರದ ಟ್ರೇಲರ್‌ನಲ್ಲಿ ಜಾಕಿಶ್ರಾಫ್‌ ಹಾಗೂ ಸಂಜಯ್ ದತ್‌ ಒಂದೇ ಫ್ರೇಮಿನಲ್ಲಿ ಕಾಣಿಸಿದ್ದಾರೆ. ಇದರಲ್ಲಿ ಸಂಜಯ್‌ ದತ್‌ ರಾಜಕೀಯ ಪಕ್ಷವೊಂದರ ನಾಯಕನ ಪಾತ್ರ ಮಾಡುತ್ತಿದ್ದು, ಜಾಕಿಶ್ರಾಫ್‌, ಸಂಜಯ್‌ ಅನುಯಾಯಿಯಾಗಿ, ಬಲಗೈ ಬಂಟನ ಪಾತ್ರದಲ್ಲಿ ನಟಿಸಿದ್ದಾರೆ. 

ಸಂಜಯ್‌ ದತ್‌ ಹಾಗೂ ಜಾಕಿಶ್ರಾಫ್‌ 2000ದಲ್ಲಿ ಬಿಡುಗಡೆಯಾದ ‘ಮಿಷನ್‌ ಕಾಶ್ಮೀರ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಅವರಿಬ್ಬರು ನಟಿಸಿದ ಮತ್ತೊಂದು ಚಿತ್ರ ‘ಖಳನಾಯಕ್’. ಇದು 1993ರಲ್ಲಿ ಬಿಡುಗಡೆಯಾಗಿದ್ದು, ಇದರಲ್ಲಿ ನಾಯಕಿಯಾಗಿ ಮಾಧುರಿ ದೀಕ್ಷಿತ್‌ ನಟಿಸಿದ್ದರು. ಇವರಿಬ್ಬರು ಈ ಎರಡೂ ಚಿತ್ರಗಳಲ್ಲಿ ಪರಸ್ಪರ ವಿರುದ್ಧದ ಪಾತ್ರಗಳಲ್ಲಿಯೇ ನಟಿಸಿದ್ದರು. 

ಈ ಚಿತ್ರದಲ್ಲಿ ಆಲಿ ಫಜಲ್‌, ಚಂಕಿ ಪಾಂಡೆ, ಸತ್ಯಜಿತತ್‌ ದುಬೆ, ಮನೀಷಾ ಕೊಯಿರಾಲ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು 2010ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರದ ರಿಮೇಕ್‌. ತೆಲುಗಿನಲ್ಲೂ ‘ಪ್ರಸ್ಥಾನಂ’ ಹೆಸರಿನಲ್ಲಿಯೇ ಬಿಡುಗಡೆಯಾಗಿತ್ತು. ದೇವ ಕಟ್ಟ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಹಿಂದಿ ರಿಮೇಕ್‌ ಚಿತ್ರವನ್ನೂ ಅವರೇ ನಿರ್ದೇಶಿಸಿದ್ದಾರೆ.  ಚಿತ್ರವನ್ನು ನಿರ್ಮಾಣ ಮಾಡಿದವರು ಸಂಜಯ್‌ ದತ್‌ ಪತ್ನಿ ಮಾನ್ಯತಾ ದತ್‌.

ಪ್ರತಿಕ್ರಿಯಿಸಿ (+)