ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ್ತನದ ಬಣ್ಣದಲ್ಲಿ... ದೀಪಿಕಾ ಪಡುಕೋಣೆ

Published 31 ಮೇ 2024, 21:42 IST
Last Updated 31 ಮೇ 2024, 21:42 IST
ಅಕ್ಷರ ಗಾತ್ರ

ಹಳದಿ ಹೊಂಬಣ್ಣದ ಉದ್ದಾನುದ್ದ ಅಂಗಿಯ ಘೇರುಗಳಲ್ಲಿ ನಲಿಯುತ್ತಿರುವ ದೀಪಿಕಾ ತಮ್ಮ ಚಿತ್ರಗಳನ್ನು ಇನ್ಸ್‌ಸ್ಟಾ ಖಾತೆಯಲ್ಲಿ ಈಚೆಗೆ ಹಂಚಿಕೊಂಡಿದ್ದಾರೆ.

ಈ ವರ್ಷ ಫೆ.29ರಂದು ತಾವು ತಾಯಿಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದ ರಣವೀರ್‌ ಮತ್ತು ದೀಪಿಕಾ ಜೋಡಿ, ಗರ್ಭಾವಸ್ಥೆಯನ್ನು ಆನಂದಿಸುತ್ತಿರುವುದಾಗಿ ಸಂದರ್ಶನಗಳಲ್ಲಿ ಮತ್ತು ಅವಾರ್ಡ್‌ ಕಾರ್ಯಕ್ರಮಗಳಲ್ಲಿ ಹೇಳಿಕೊಳ್ಳುತ್ತಲೇ ಇದ್ದಾರೆ.

ಈಗ ತಾಯ್ತನದ ಸಂಭ್ರಮದಲ್ಲಿ ಮಿಂಚುತ್ತಿರುವುದಾಗಿ, ಮಮತೆಯಲ್ಲಿ ಮಿಂದೇಳುತ್ತಿರುವುದಾಗಿ ದೀಪಿಕಾ ಹೇಳಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಯಾರಾದರೂ ಇದು ನಿನ್ನಿಂದಾಗದು ಎಂದು ಹೇಳಿದರೆ ಅದನ್ನು ಮಾಡಿ ತೋರಿಸಲೇಬೇಕು ಎಂಬ ಛಲ ನನ್ನಲ್ಲಿ ಮೂಡುತ್ತದೆ. ಇದೇ ಕಾರಣದಿಂದಾಗಿಯೇ ನಾನು ಹಟಮಾರಿ ಎಂದೂ ಹೆಸರಾಗಿದ್ದಿದೆ. ಆದರೆ ಅಸಾಧ್ಯ ಎಂದುದನ್ನು ಮಾಡಿತೋರಿಸಬೇಕು ಎಂಬ ಹಂಬಲ ಹಟವಾಗಿ ಬದಲಾಗುವುದೇ ಇಚ್ಛಾಶಕ್ತಿಯಿಂದ. ಇದೇ ಕಾರಣಕ್ಕೆ ಕಳೆದ ವರ್ಷ ಜವಾನ್‌ ಇರಲಿ, ಪಠಾಣ್‌ ಇರಲಿ, ಫೈಟರ್‌ ಚಿತ್ರಗಳಿರಲಿ ಎಲ್ಲದರಲ್ಲಿಯೂ ಮಿಂಚುವಂತಾಯಿತು. ಆ್ಯಕ್ಷನ್‌ ಸಿನಿಮಾಗೆ ಬೇಕಾದ ಕೌಶಲಗಳನ್ನು ಕಲಿಯಲು ಸಾಕಷ್ಟು ಶ್ರಮಿಸಿದೆ. ಇಷ್ಟಕ್ಕೂ ನಾವು ಬೆವರು ಸುರಿಸದೆ ಯಶಸ್ಸನ್ನಂತೂ ಪಡೆಯಲಾಗದು ಎಂದು ಹೇಳಿದ್ದರು.

ಸೆಪ್ಟೆಂಬರ್‌ನಲ್ಲಿ ಮಗುವನ್ನು ನಿರೀಕ್ಷಿಸುತ್ತಿರುವ ಈ ಜೋಡಿ 2018ರಲ್ಲಿ ಇಟಲಿಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT