ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೇಮಂ ಪೂಜ್ಯಂ’ ಸಿನಿಮಾ ಅವಧಿಗೆ ಕತ್ತರಿ

Last Updated 17 ನವೆಂಬರ್ 2021, 15:09 IST
ಅಕ್ಷರ ಗಾತ್ರ

ಬೆಂಗಳೂರು: ಡಾ.ರಾಘವೇಂದ್ರ ನಿರ್ದೇಶನದ, ‘ನೆನಪಿರಲಿ’ ಖ್ಯಾತಿಯ ಪ್ರೇಮ್‌ ನಟನೆಯ ‘ಪ್ರೇಮಂ ಪೂಜ್ಯಂ’ ಸಿನಿಮಾದ ಅವಧಿಯನ್ನು 11 ನಿಮಿಷ ಕಡಿತಗೊಳಿಸಲಾಗಿದೆ ಎಂದು ಚಿತ್ರತಂಡವು ಬುಧವಾರ ತಿಳಿಸಿದೆ.

ನ.12ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಪ್ರೇಮಕಥೆಯೂ ವಿಭಿನ್ನವಾಗಿದೆ. ಆದರೆ ಸಿನಿಮಾದ ಅವಧಿ ಮಾತ್ರ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಿತ್ತು. 173 ನಿಮಿಷಗಳ ಈ ಸಿನಿಮಾದಲ್ಲಿ 12 ಹಾಡುಗಳಿವೆ. ಕಥೆಯನ್ನು ಮೆಚ್ಚಿಕೊಂಡರೂ ಹಲವು ಪ್ರೇಕ್ಷಕರು ಚಿತ್ರದ ಅವಧಿ ಮತ್ತು ಕೆಲ ದೃಶ್ಯಗಳನ್ನು ವಿನಾಕಾರಣ ಎಳೆದಿರುವುದನ್ನು ಆಕ್ಷೇಪಿಸಿದ್ದರು. ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಗ್ರಹಿಸಿರುವ ಚಿತ್ರತಂಡವು ಇದೀಗ ಚಿತ್ರದ ಸಮಯಕ್ಕೆ ಕತ್ತರಿ ಹಾಕಿದ್ದು, ಎರಡು ಮೂರು ಹಾಡುಗಳನ್ನೂ ತೆಗೆದಿದೆ.

ಚಿತ್ರವನ್ನು ಮತ್ತೆ ಸೆನ್ಸಾರ್‌ಗೆ ಕಳುಹಿಸಲಾಗಿದ್ದು, ಶುಕ್ರವಾರ ಅಥವಾ ಶನಿವಾರದಿಂದ ಚಿತ್ರಮಂದಿರಗಳಲ್ಲಿ ಇದು ಪ್ರದರ್ಶನಗೊಳ್ಳಲಿದೆ ಎಂದು ಚಿತ್ರತಂಡವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT