ಬುಧವಾರ, ಅಕ್ಟೋಬರ್ 20, 2021
25 °C

‘ಫಿಸಿಕ್ಸ್ ಟೀಚರ್’ ಆಗಿ ಬರುತ್ತಿದ್ದಾರೆ ಸುಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಮುಖ ಚಂದನವನಕ್ಕೆ ನಾಯಕ, ನಿರ್ದೇಶಕನಾಗಿ ಪರಿಚಯವಾಗುತ್ತಿದ್ದಾರೆ. ಹಲವು ವರ್ಷಗಳಿಂದ ಕಿರುತೆರೆ ಹಾಗು ಹಿರಿತೆರೆಯ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಶಶಿಕುಮಾರ್ ಹಾಗೂ ನಂದಿತಾ ಯಾದವ್ ಪುತ್ರ ಸುಮುಖ.

ನಂದಿತಾ ಯಾದವ್ ನಿರ್ದೇಶನದ ‘ರಾಜಸ್ಥಾನ್ ಡೈರೀಸ್’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಅನುಭವ ಸುಮುಖ ಅವರಿಗಿದೆ. ಈಗ ಸುಮುಖ ‘ಫಿಸಿಕ್ಸ್ ಟೀಚರ್’ಗೆ ನಿರ್ದೇಶಕ, ನಾಯಕ.

‘ಇದು ಟೀಚರ್ ಮತ್ತು ಶಾಲೆಗಷ್ಟೇ ಮೀಸಲಾದ ಕಥೆಯಲ್ಲ. ಒಬ್ಬ ಅವಿವಾಹಿತ ಫಿಸಿಕ್ಸ್ ಟೀಚರ್ ಜೀವನದಲ್ಲಿ ನಡೆಯುವ ಕಥೆಯಿದು. ಭೌತಶಾಸ್ತ್ರ ನಮ್ಮ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಲು ಹೊರಟಿದ್ದೇನೆ. ಬ್ರಾಹ್ಮಣರ ಮನೆಯಲ್ಲಿ ಈ ಫಿಸಿಕ್ಸ್ ಟೀಚರ್ ಬೆಳೆದಿರುತ್ತಾನೆ. ಅವರ ಮನೆಯಲ್ಲಿ ಕೇಳಿ ಬರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕೂಡ ಈ ಚಿತ್ರದ ಒಂದು ಭಾಗವಾಗಿರುತ್ತದೆ. ಅ. 7ರಿಂದ ಚಿತ್ರೀಕರಣ ಆರಂಭವಾಗಿ. ಮಾಸಾಂತ್ಯಕ್ಕೆ ಮುಗಿಯಲಿದೆ. ಈ ವರ್ಷದ ಕೊನಗೆ ಅಥವಾ ಹೊಸವರ್ಷದ ಆಗಮನದ ವೇಳೆ ‘ಫಿಸಿಕ್ಸ್ ಟೀಚರ್’ ನಿಮ್ಮ ಮುಂದೆ ಹಾಜರಾಗುತ್ತಾನೆ’ ಎಂದರು ಸುಮುಖ

‘ನಾನು ಈ ಚಿತ್ರದಲ್ಲಿ ಜಲಜ ಎಂಬ ಪಾತ್ರ ಮಾಡುತ್ತಿದ್ದೇನೆ. ಸುಮುಖ ‘ಫಿಸಿಕ್ಸ್ ಟೀಚರ್’ ಆದರೆ, ನಾನು ಮನಃಶಾಸ್ತ್ರ ಟೀಚರ್. ಇದರಲ್ಲಿ ‌ಬರೀ ಫಿಸಿಕ್ಸ್ ಅಷ್ಟೇ ಅಲ್ಲದೇ ಪ್ರೇಮಕಥೆಯೂ ಇದೆ. ಕಥೆ ಕೇಳಿ ತುಂಬಾ ಉತ್ಸುಕಳಾಗಿದ್ದೇನೆ. ಪ್ರೇಕ್ಷಕರಿಗೆ ನಮ್ಮ ಚಿತ್ರದ ಕಥೆ ಕಾಡಲಿದೆ’ ಎಂದರು ನಾಯಕಿ ಪ್ರೇರಣಾ ಕಂಬಂ.

ಚಿತ್ರದ ಮೂರು ಹಾಡುಗಳಿಗೆ ಸಂಗೀತ ನೀಡಿರುವ ಹಾಗೂ ಸುಮುಖ ಅವರೊಂದಿಗೆ ಸೇರಿ ಕಥೆ ಬರೆದಿರುವ ಸ್ಕಂಧ ಸುಬ್ರಹ್ಮಣ್ಯ ಸೂಕ್ಷ್ಮವಾಗಿ ಕಥೆಯ ಎಳೆ ತೆರೆದಿಟ್ಟರು..

ಮಂಡ್ಯ ರಮೇಶ್, ದತ್ತಣ್ಣ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಛಾಯಾಗ್ರಾಹಕ ರಾಘು ಗ್ಯಾರಹಳ್ಳಿ, ಸಂಕಲನಕಾರ ಅಜಯ್ ಕುಮಾರ್, ವಸ್ತ್ರಾಲಂಕಾರ ಸಾಚಿ ರಾವಲ್, ಪ್ರಸಾಧನಕ್ಕೆ ಅಭಿಲಾಷ ಕುಲಕರ್ಣಿ  ತಂಡದಲ್ಲಿದ್ದಾರೆ.

ಪಾಸಿಂಗ್ ಶಾಟ್ ಫಿಲ್ಮ್ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು