ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಪ್ರೆಸೆಂಟ್‌ ಪರಪಂಚ

Last Updated 9 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಚಿತ್ರದ ನಾಯಕ ಕೋಪಿಷ್ಠನಾಗಿದ್ದ. ಖಳನೋ, ಖಳನೋ ಕಡೆಯವನೋ... ದುಷ್ಟನೊಬ್ಬನನ್ನು ರೋಷದಿಂದ ಚಚ್ಚುತ್ತಿದ್ದ. ಸುತ್ತಲೂ ಕತ್ತಲೆ ತುಂಬಿದ್ದ, ದೂಳಿನಿಂದ ಆವೃತವಾಗಿದ್ದ ವಿಶಾಲ ಕೋಣೆಯೊಂದರಲ್ಲಿ ಇರಿಸಿದ್ದ ಮೇಜಿನ ಮೇಲೆ ಖಳನನ್ನು ಎತ್ತಿ ಕುಕ್ಕಿದ. ಹಾಗೆ ಕುಕ್ಕಿದ ರಭಸಕ್ಕೆ ಮೇಜು ಮುರಿದುಬಿತ್ತು.

ಮೇಜಿನ ಚೂರುಗಳು ಅತ್ತಿತ್ತ ಚೆಲ್ಲಾಪಿಲ್ಲಿಯಾದವು... ಅಷ್ಟರಲ್ಲಿ ನಿರ್ದೇಶಕ ಅಭಿರಾಮ್‌ ತಮ್ಮ ಕುರ್ಚಿಯಿಂದ ಖುಷಿಯಿಂದ ಎದ್ದರು. ‘ದೃಶ್ಯ ಚೆನ್ನಾಗಿ ಬಂದಿದೆ’ ಎಂದು ನಾಯಕನನ್ನು ಅಭಿನಂದಿಸಿದರು. ಸಿನಿಮಾದಲ್ಲಿ ಐದಾರು ಸೆಕೆಂಡುಗಳ ಕಾಲ ಬರಬಹುದಾದ ಒಂದು ಚಿಕ್ಕ ದೃಶ್ಯಕ್ಕಾಗಿ ಚಿತ್ರತಂಡ ಗಂಟೆಗಟ್ಟಲೆ ಸಿದ್ಧತೆ ನಡೆಸಿ, ಖಳನನ್ನು ಹೇಗೆ ಚಚ್ಚಬೇಕು ಎಂದು ನಾಯಕನಿಗೂ, ನಾಯಕನಿಂದ ಹೇಗೆ ಹೊಡೆಸಿಕೊಳ್ಳಬೇಕು ಎಂಬುದನ್ನು ಖಳನಿಗೂ ಹೇಳಿಕೊಟ್ಟಿತ್ತು.

ಇದು ‘Present ಪ್ರಪಂಚ 0% ಲವ್’ ಚಿತ್ರದ ಚಿತ್ರೀಕರಣದ ಸ್ಥಳದಲ್ಲಿ ಕಂಡ ದೃಶ್ಯ. ಎರಡು ವರ್ಷದ ಹಿಂದೆ ‘ಸಂಯುಕ್ತ 2’ ಎನ್ನುವ ಹಾರರ್‌ ಕಥೆಯೊಂದನ್ನು ಸಿನಿಮಾ ರೂಪದಲ್ಲಿ ಹೇಳಿದ್ದ ಅಭಿರಾಮ್‌ ಈಗ ಈ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ‘ಸಂಯುಕ್ತ 2’ ನಿರ್ಮಾಣ ಮಾಡಿದ್ದ ಮಂಜುನಾಥ್ ಡಿ.ಎಸ್. ಅವರೇ ಈ ಚಿತ್ರದ ನಾಯಕ ನಟ.

‘ಸಿನಿಮಾ‌ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಈಗ ಚಿತ್ರೀಕರಣ ಆಗಿದ್ದು ಕೊನೆಯ ಫೈಟ್ ದೃಶ್ಯ. ಫೆಬ್ರುವರಿ 14ರಂದು ಚಿತ್ರ ತೆರೆಗೆ ಬರಲಿದೆ’ ಎಂದರು ಅಭಿರಾಮ್.

‘ಮಂಜುನಾಥ್ ಅವರು ಸಂಯುಕ್ತ 2 ಚಿತ್ರದಲ್ಲಿ ಖಳನ ಪಾತ್ರ ನಿಭಾಯಿಸಿದ್ದರು. ಅವರಲ್ಲಿ ಇದ್ದ ಬದ್ಧತೆಯನ್ನು ಕಂಡಿದ್ದ ನಾನು, ಈ ಚಿತ್ರಕ್ಕೆ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡೆ. ಇನ್ನೊಂದು ಮುಖ್ಯ ಪಾತ್ರವನ್ನು ಯಶಸ್ ಅಭಿ ನಿಭಾಯಿಸಿದ್ದಾರೆ. ಯಶಸ್ ಅವರು ಅದ್ಭುತ‌ ನಟ’ ಎಂದು ಹೇಳಿದರು.

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ, ಪತಿ–ಪತ್ನಿಯ ಜೀವನದಲ್ಲಿ ಏನು ನಡೆಯಬಹುದೋ ಅದು ಈ ಚಿತ್ರದ ಕಥೆ. ಈ ಕಥೆಯನ್ನು ಥ್ರಿಲ್ಲರ್, ರೊಮ್ಯಾನ್ಸ್ ಹಾಗೂ ಕಾಮಿಡಿಯ ಮಿಶ್ರಣದಲ್ಲಿ ನೀಡುತ್ತಿದ್ದೇವೆ’ ಎಂದು ಸಿನಿಮಾ ಕಥೆಯ ಬಗ್ಗೆ ಚಿಕ್ಕದೊಂದು ವಿವರಣೆ ನೀಡಿದರು.

ಯಶಸ್ ಅಭಿ ಅವರದ್ದು ಒಂಥರಾ ಗೊಂದಲ ಮೂಡಿಸುವ ಪಾತ್ರ. ಅಕ್ಷತಾ ಈ ಚಿತ್ರದ ನಾಯಕಿ.

ಅಭಿರಾಮ್, ಡಿ.ಎಸ್. ಮಂಜುನಾಥ್, ಯಶಸ್ ಅಭಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT