ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಟಿಆರ್ ಜನ್ಮಶತಮಾನೋತ್ಸವ ಪ್ರಯುಕ್ತ ₹ 100 ನಾಣ್ಯ ಬಿಡುಗಡೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನಾಣ್ಯ ಬಿಡುಗಡೆ
Published 28 ಆಗಸ್ಟ್ 2023, 10:26 IST
Last Updated 28 ಆಗಸ್ಟ್ 2023, 10:26 IST
ಅಕ್ಷರ ಗಾತ್ರ

ನವದೆಹಲಿ: ದಿವಂಗತ ನಟ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ ಟಿ ರಾಮರಾವ್ (ಎನ್‌ಟಿಆರ್‌) ಜನ್ಮ ಶತಮಾನೋತ್ಸವ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಣ್ಯ ಬಿಡುಗಡೆ ಮಾಡಿದರು.

ಇದು ₹ 100 ಮೌಲ್ಯದ ನಾಣ್ಯ ಎನ್ನಲಾಗಿದೆ.

ಸೋಮವಾರ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ನಾಣ್ಯವನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಎನ್‌ಟಿಆರ್ ಕುಟುಂಬದವರು ಹಾಜರಿದ್ದರು.

ಎನ್‌ಟಿಆರ್‌ ಅವರು, ರಾಮಾಯಣ ಮಹಾಭಾರತದ ಪಾತ್ರಗಳಲ್ಲಿ ಅಭಿನಯ ಮಾಡಿ ಜನಮಾನಸದಲ್ಲಿ ನೆಲೆಗೊಂಡಿದ್ದರು. ಅಲ್ಲದೇ ಅವರು ಅಭಿನಯಿಸುತ್ತಿದ್ದ ಚಿತ್ರಗಳಲ್ಲಿ ಜನರ ನೋವು–ನಲಿವುಗಳಿಗೆ ಧ್ವನಿಯಾಗಿದ್ದರು ಎಂದು ಮುರ್ಮು ಅವರು ನಾಣ್ಯ ಬಿಡುಗಡೆ ಮಾಡಿ ಮಾತನಾಡಿದರು.

ಎನ್‌ಟಿಆರ್ ಅವರು ರಾಜಕೀಯಕ್ಕೆ ಧುಮುಕಿ ಒಬ್ಬ ಅಪ್ರತಿಮ ನಾಯಕನಾಗಿ ಜನರ ಸೇವೆ ಮಾಡಿದರು. ಅವರು ಮಾಡಿದ ಅನೇಕ ಜನಪರ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯ. ಅವರು ತೆಲುಗು ಜನರ ಹೃದಯ ಗೆದ್ದಿದ್ದರು ಎಂದು ಕೊಂಡಾಡಿದರು.

ಇದೇ ವೇಳೆ ಮುರ್ಮು ಅವರು ನಾಣ್ಯ ಹೊರ ತಂದಿರುವುದಕ್ಕೆ ಹಣಕಾಸು ಇಲಾಖೆಯನ್ನು ಅಭಿನಂದಿಸಿದರು. 1923 ರ ಮೇ 28 ರಂದು ಎನ್‌ಟಿಆರ್ ಅವರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಜನಿಸಿದ್ದರು. ಮೂರು ಬಾರಿ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT