ಶುಕ್ರವಾರ, ಡಿಸೆಂಬರ್ 3, 2021
24 °C

ದಾಂಪತ್ಯದಲ್ಲಿ ಬಿರುಕಿನ ವದಂತಿಗಳನ್ನು ನಿರಾಕರಿಸಿದ ಪ್ರಿಯಾಂಕಾ ಚೋಪ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ನೆಟ್‌ಫ್ಲಿಕ್ಸ್ ಕಾಮಿಡಿ ಸ್ಪೆಷಲ್ ‘ಜೋನಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್’ನ ವಿಡಿಯೊ ತುಣುಕೊಂದನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ದಾಂಪತ್ಯದ ಬಗ್ಗೆ ಹರಡಿದ್ದ ವದಂತಿಗಳಿಗೆ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತೆರೆ ಎಳೆದಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹೆಸರಿನ ಜತೆಗಿದ್ದ ‘ಜೋನಸ್’ ಪದವನ್ನು ಸೋಮವಾರ ತೆಗೆದುಹಾಕಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳಿಗೆ ಕಾರಣವಾಗಿತ್ತು. ಪ್ರಿಯಾಂಕಾ ಮತ್ತು ಅವರ ಪತಿ, ಪಾಪ್ ಗಾಯಕ ನಿಕ್ ಜೋನಸ್‌ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ವದಂತಿ ಹರಿದಾಡಿತ್ತು.

ಓದಿ: 

ಮಂಗಳವಾರ ಸಂಜೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಕ್ಲಿಪ್ ಪೋಸ್ಟ್ ಮಾಡಿರುವ ಪ್ರಿಯಾಂಕಾ, ತನ್ನ ಹಾಗೂ ಪತಿಯ ನಡುವಣ ಬಾಂಧವ್ಯದ ಬಗ್ಗೆ ಉಲ್ಲೇಖಿಸಿದ್ದಾರೆ.

ತಮ್ಮಿಬ್ಬರ ನಡುವೆ 10 ವರ್ಷ ವಯಸ್ಸಿನ ಅಂತರವಿದ್ದರೂ ಪರಸ್ಪರ ಹೇಗೆ ಅನೇಕ ವಿಷಯಗಳನ್ನು ಕಲಿಯುತ್ತಿದ್ದೇವೆ ಎಂಬುದನ್ನು ವಿಡಿಯೊದಲ್ಲಿ ವಿವರಿಸಿರುವ ಪ್ರಿಯಾಂಕಾ, ಯಶಸ್ವಿ ನಟನಾ ವೃತ್ತಿ ಹೇಗಿರುತ್ತದೆ ಎಂಬುದನ್ನು ನಾನು ಅವರಿಗೆ ತೋರಿಸಿಕೊಟ್ಟಿರುವೆ. ಅದೇ ರೀತಿ ಅವರೂ ಹಲವು ವಿಷಯಗಳ ಬಗ್ಗೆ ನನಗೆ ತಿಳಿಸಿಕೊಟ್ಟಿದ್ದಾರೆ ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು