ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‌ನಲ್ಲಿ ತೆರೆದಿದ್ದ ‘ಸೋನಾ’ ರೆಸ್ಟೋರೆಂಟ್ ಸ್ಥಗಿತ

Published 20 ಜೂನ್ 2024, 10:59 IST
Last Updated 20 ಜೂನ್ 2024, 10:59 IST
ಅಕ್ಷರ ಗಾತ್ರ

ನವದೆಹಲಿ: ನ್ಯೂಯಾರ್ಕ್‌ನಲ್ಲಿ ಆರಂಭಿಸಿದ್ದ ‘ಸೋನಾ’ ರೆಸ್ಟೋರೆಂಟ್‌ ಮುಚ್ಚಲಿದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಘೋಷಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಸಹ-ಸ್ಥಾಪಕಿ ಸ್ಥಾನದಿಂದ ಹಿಂದೆಸರಿದ ಕಾರಣ ರೆಸ್ಟೋರೆಂಟ್‌ ಬಂದ್‌ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಅವರು ಉದ್ಯಮಿ ಮನೀಶ್‌ ಕೆ. ಗೋಯಲ್‌ ಅವರೊಂದಿಗೆ 2021ರ ಜೂನ್‌ನಲ್ಲಿ ರೆಸ್ಟೋರೆಂಟ್‌ ಆರಂಭಿಸಿದ್ದರು. ಕಳೆದ ಆಗಸ್ಟ್‌ನಲ್ಲಿ ರೆಸ್ಟೋರೆಂಟ್‌ನ ಸಹಭಾಗಿತ್ವದಿಂದ ಪ್ರಿಯಾಂಕಾ ಹೊರನಡೆದಿದ್ದರು. 

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಸೋನಾ’ ಇದೇ ಭಾನುವಾರದಂದು ಕೊನೆಯ ಕಾರ್ಯಾಚರಣೆ ನಡೆಸಲಿದೆ ಎಂದು ಬರೆದುಕೊಂಡಿದ್ದಾರೆ.

‘ಸುಮಾರು ಮೂರು ವರ್ಷಗಳ ಬಳಿಕ ಸೋನಾ ಸ್ಥಗಿತಗೊಳ್ಳುತ್ತಿದೆ. ನಮ್ಮ ರೆಸ್ಟೋರೆಂಟ್‌ಗೆ ಬಂದ ಎಲ್ಲರಿಗೂ ಧನ್ಯವಾದ, ನಿಮ್ಮನ್ನು ಸತ್ಕರಿಸುವುದು ನಮ್ಮ ಗೌರವವಾಗಿದೆ. ಜತೆಗೆ ರುಚಿಯಾದ ಅಡುಗೆ ತಯಾರಿಸಿ ಉಣಬಡಿಸಿದ ತಂಡಕ್ಕೆ ಧನ್ಯವಾದಗಳು, ಜೂನ್‌ 30ರಂದು ಕೊನೆಯ ಬಾರಿ ಆಹಾರ ತಯಾರಿಸಲಾಗುತ್ತಿದೆ. ಎಲ್ಲರಿಗೂ ಆತ್ಮೀಯ ಸ್ವಾಗತ’ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಪ್ರಿ‌ಯಾಂಕಾ ಸದ್ಯ ಆಸ್ಟ್ರೇಲಿಯಾಲ್ಲಿ ‘ದಿ ಬ್ಲಫ್‌’ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT