ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ‘RRR’ ವಿಶೇಷ ಪ್ರದರ್ಶನ ಆಯೋಜಿಸಿದ ಪ್ರಿಯಾಂಕಾ ಚೋಪ್ರಾ

Last Updated 18 ಜನವರಿ 2023, 12:30 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್: ಹಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಎಸ್‌.ಎಸ್‌.ರಾಜಮೌಳಿ ಅವರ "ಆರ್‌ಆರ್‌ಆರ್" ನ ವಿಶೇಷ ಪ್ರದರ್ಶನವನ್ನು ನಟಿ ಪ್ರಿಯಾಂಕಾ ಚೋಪ್ರಾ ಆಯೋಜಿಸಿದ್ದರು.

ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದು, ನಿರ್ದೇಶಕ ರಾಜಮೌಳಿ ಮತ್ತು ತೆಲುಗು ಚಲನಚಿತ್ರದ ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಅವರೊಂದಿಗೆ ವೇದಿಕೆಯಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದಿರುವ ಆರ್‌ಆರ್‌ಆರ್ ತಂಡಕ್ಕೆ ಶುಭ ಹಾರೈಸಿದ್ದು, ಈ ಅತ್ಯದ್ಭುತ ಭಾರತೀಯ ಚಲನಚಿತ್ರದ ಪಯಣಕ್ಕೆ ನಾನು ಈ ಮೂಲಕವಾದರೂ ಚಿಕ್ಕ ಕೊಡುಗೆ ನೀಡುತ್ತೇನೆ. ಶುಭವಾಗಲಿ ಮತ್ತು ಅಭಿನಂದನೆಗಳು ಎಂದು ತಂಡದ ಸದಸ್ಯರನ್ನು ಟ್ಯಾಗ್‌ ಮಾಡಿ ಪ್ರಿಯಾಂಕಾ ಟ್ವೀಟ್‌ ಮಾಡಿದ್ದಾರೆ.

ಪ್ರಿಯಾಂಕಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಾಜಮೌಳಿ, ನೀವು "ಗ್ಲೋಬಲ್ ಸೂಪರ್ ವುಮನ್" ಎಂದು ಶ್ಲಾಘಿಸಿದ್ದಾರೆ.

‘ನೀವು ಜಾಗತಿಕ ಸೂಪರ್‌ವುಮನ್! ನಮ್ಮ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಮತ್ತು ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು’ ಎಂದು ರಾಜಮೌಳಿ ಹೇಳಿದ್ದಾರೆ.

1920 ರ ದಶಕದಲ್ಲಿನ ಭಾರತೀಯ ಕ್ರಾಂತಿಕಾರಿಗಳನ್ನು ಕೇಂದ್ರೀಕರಿಸಿರುವ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆಯಾಗಿದೆ . ಅಲ್ಲೂರಿ ಸೀತಾರಾಮ ರಾಜುವಾಗಿ ರಾಮ್‌ ಚರಣ್ ಮತ್ತು ಕೊಮರಂ ಭೀಮ್ ಆಗಿ ಜೂನಿಯರ್ ಎನ್‌ಟಿಆರ್ ಚಿತ್ರದಲ್ಲಿ ನಟಿಸಿದ್ದರು. ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ "ನಾಟು ನಾಟು" ಗೀತೆಗೆ ಗೋಲ್ಡನ್ ಗ್ಲೋಬ್ ಮತ್ತು ಎರಡು ವಿಮರ್ಶಕರ ಆಯ್ಕೆ ಪ್ರಶಸ್ತಿಗಳು ಲಭಿಸಿದೆ. ಆಸ್ಕರ್‌ ಸ್ಪರ್ಧಾ ಅರ್ಹತಾ ಪಟ್ಟಿಯಲ್ಲಿ ಕೂಡ ಚಿತ್ರ ಸ್ಥಾನ ಪಡೆದಿದೆ.

ಈ ತಿಂಗಳ ಆರಂಭದಲ್ಲಿ, 2023 ರ ಆಸ್ಕರ್‌ಗಾಗಿ ಭಾರತದಿಂದ ಅಧಿಕೃತ ಪ್ರವೇಶ ಪಡೆದಿರುವ "ಲಾಸ್ಟ್ ಫಿಲ್ಮ್ ಶೋ" ನ ವಿಶೇಷ ಪ್ರದರ್ಶನವನ್ನು ಕೂಡ ಪ್ರಿಯಾಂಕಾ ಅಮೆರಿಕದಲ್ಲಿ ಆಯೋಜಿಸಿದ್ದರು. ಗುಜರಾತಿ ಭಾಷೆಯ ಚಲನಚಿತ್ರವನ್ನು ಅಕಾಡೆಮಿಯು 95ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಿದೆ. ಅಂತಿಮ ನಾಮನಿರ್ದೇಶನ ಜನವರಿ 24 ರಂದು ಪ್ರಕಟಗೊಳ್ಳಲಿದೆ.

ಪ್ರಿಯಾಂಕಾ ಪಾಕಿಸ್ತಾನದ ಅಧಿಕೃತ ಆಸ್ಕರ್ ಪ್ರವೇಶ ‘ಜಾಯ್ಲ್ಯಾಂಡ್‌’ ಚಿತ್ರದ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT