‘ಇದು ಅತ್ಯಂತ ವಿಶೇಷವಾದ ಸಂಗತಿ. ನಮ್ಮ ಮರಾಠಿ ಚಿತ್ರ ‘ಪಾನಿ’ ಅ. 18ರಂದು ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ಭೇಟಿಯಾಗೋಣ. ಜಗತ್ತು ಎದುರಿಸುತ್ತಿರುವ ಅತಿ ಮುಖ್ಯವಾದ ನೀರಿನ ಸಮಸ್ಯೆ ಮತ್ತು ಅದಕ್ಕೆ ಕಂಡುಕೊಂಡ ಪರಿಹಾರ ಕುರಿತಾದ ಚಿತ್ರ ಇದು. ಇದು ಒಬ್ಬ ವ್ಯಕ್ತಿಯ ಬದುಕಿನ ಕಥೆಯಾಗಿದೆ. ಕ್ಷಿಪ್ರ ಬದಲಾವಣೆ ಮೂಲಕ ವ್ಯಕ್ತಿ ತನ್ನ ಸುತ್ತಲಿನ ಜಗತ್ತಿನಲ್ಲಿ ತರುವ ಬದಲಾವಣೆಯನ್ನು ‘ಪಾನಿ’ ಚಿತ್ರದ ಮೂಲಕ ನೋಡಬಹುದು’ ಎಂದು ಬರೆದುಕೊಂಡಿದ್ದಾರೆ.
‘ಹೊಸ ಪ್ರತಿಭೆಗಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುವುದಕ್ಕೆ ಸಂತಸವಿದೆ. ಹಾಗೆಯೇ ಭಾರತದ ಪ್ರತಿಯೊಂದು ಭಾಗದ ಸ್ಥಳೀಯ ಪ್ರೇರಣಾದಾಯಕ ಕಥೆಗಳನ್ನು ಆಧರಿಸಿದ ಚಿತ್ರ ಮಾಡುವ ಯೋಜನೆ ಇದೆ. ಇದಕ್ಕೊಂದು ಉದಾಹರಣೆ ‘ಪಾನಿ’ ಚಿತ್ರ. ಮರಾಠಿಯಲ್ಲಿ ಇದು ನಮ್ಮ ನಾಲ್ಕನೇ ಚಿತ್ರವಾಗಿದೆ’ ಎಂದಿದ್ದಾರೆ.
‘ಪಾನಿ’ ಚಿತ್ರಕ್ಕೆ ನಿತಿನ್ ದೀಕ್ಷಿತ್ ಅವರ ಕಥೆ ಇದೆ. ಮುಖ್ಯ ಭೂಮಿಕೆಯಲ್ಲಿ ಆದಿನಾಥ್ ಎಂ. ಕೊಠಾರೆ, ರುಚಾ ವೈಧ್ಯ, ಸುಬೋಧ್ ಭಾವೆ, ರಜತ್ ಕಪೂರ್, ಕಿಶೋರ್ ಕದಂ, ನಿತಿನ್ ದೀಕ್ಷಿತ್, ಸಚಿನ್ ಗೋಸ್ವಾಮಿ, ಮೋಹನ್‌ಬಾಯಿ, ಶ್ರೀಪಾದ್ ಜೋಶಿ ಹಾಗೂ ವಿಕಾಶ್ ಪಾಂಡುರಂಗ ಪಾಟೀಲ್ ಇದ್ದಾರೆ.