ಗುರುವಾರ , ಮೇ 13, 2021
22 °C

ಒಳ ಉಡುಪು ಕಳಚಲು ಹೇಳಿದ್ದ ನಿರ್ದೇಶಕ: ಕಹಿ ನೆನಪು ತೆರೆದಿಟ್ಟ ಪ್ರಿಯಾಂಕಾ ಚೋಪ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ಗೆ ಕಾಲಿಟ್ಟ ದಿನಗಳಲ್ಲಿ ಒಳ ಉಡುಪು ಕಳಚಲು ಹೇಳಿದ್ದ ನಿರ್ದೇಶಕನ ಕಥೆ ತೆರೆದಿಟ್ಟಿದ್ದಾರೆ ಪ್ರಿಯಾಂಕಾ ಚೋಪ್ರಾ.

ಅಮೆರಿಕದ ‘ಒಪ್ರಾ ಇನ್‌ಫ್ರೇ’ ವೇದಿಕೆಯಲ್ಲಿ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹಳೆಯ ಘಟನೆಯನ್ನು ಸ್ಮರಿಸಿದ್ದಾರೆ.

‘ಚಿತ್ರದಲ್ಲಿ ನಾನು ಸಾಲ್ಟ್ರಿ ನೃತ್ಯ ಮಾಡಬೇಕಿತ್ತು. ಆಗ ಚಿತ್ರದ ನಿರ್ದೇಶಕ ನನ್ನ ಬಳಿ ಬಂದು ನಾನು ನೃತ್ಯ ಮಾಡುತ್ತಾ ಒಳ ಉಡುಪುಗಳನ್ನು ಕಳಚಬೇಕು ಎಂದು ಹೇಳಿದರು. ನನಗೆ ತುಂಬಾ ಕೋಪ ಬಂತು. ಆದರೆ, ನಾನು ಏನನ್ನೂ ಹೇಳಲಿಲ್ಲ. ನನಗೆ ನಟಿಸಲು ಇಷ್ಟವಿಲ್ಲ ಎಂದು ಹೇಳಿ ನಾನು ಆ ಚಿತ್ರದಿಂದ ಹೊರ ಬಂದೆ. ಚಿತ್ರರಂಗಕ್ಕೆ ಬಂದ ಆರಂಭದ ದಿನಗಳು ಅವು. ಆದ್ದರಿಂದ ಅವರ ವಿರುದ್ಧ ಪ್ರತಿಭಟಿಸಲು ಭಯವಾಯಿತು’ ಎಂದು ಹೇಳಿಕೊಂಡಿದ್ದಾರೆ.

‘ಆ ಘಟನೆ ನನಗೆ ದಿಗ್ಭ್ರಮೆ ಉಂಟು ಮಾಡಿತ್ತು. ನಾನು ಪ್ರತಿಭಟಿಸಲಿಲ್ಲವಲ್ಲಾ ಎಂದು ಯೋಚಿಸಿ ಈಗ ವಿಷಾದವೆನಿಸುತ್ತಿದೆ. ನೀವು ಕೇಳುತ್ತಿರುವುದು ತಪ್ಪು ಎಂದು ಹೇಳಬೇಕಿತ್ತು. ಆದರೆ, ಅಂದು ಮೌನವಾಗಿ ಇಲ್ಲಿಂದ ದೂರ ನಡೆಯುವುದೇ ಉತ್ತಮ ಅಂದುಕೊಂಡೆ’ ಎಂದಿದ್ದಾರೆ.

ಮಿಸ್‌ ಇಂಡಿಯಾ, ವಿಶ್ವ ಸುಂದರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಛೋಪ್ರಾ 2004ರಲ್ಲಿ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಈಗ ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರದ್ದೇ ಕೃತಿ ‘ಪ್ರಿಯಾಂಕಾ ಚೋಪ್ರಾ ಜೋನಾಸ್‌- ಅನ್‌ಫಿನಿಷ್ಡ್‌’ ಆಧರಿಸಿ ಈ ಸಂದರ್ಶನ ನಡೆದಿದೆ.

ಇದನ್ನೂ ಓದಿ... ಲೇಖಕ ಅಹೋರಾತ್ರ ಮನೆಗೆ ನುಗ್ಗಿ ನಟ ಸುದೀಪ್‌ ಅಭಿಮಾನಿಗಳಿಂದ ದಾಂದಲೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು