ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಹಾರರ್‌ ಚಿತ್ರದೊಂದಿಗೆ ಬಂದ ಪ್ರಿಯಾಂಕಾ ಉಪೇಂದ್ರ

ನಿರ್ದೇಶಕ ಲೋಹಿತ್‌ ಜೊತೆಗೂಡಿ ನಟಿ ಪ್ರಿಯಾಂಕಾ ಮತ್ತೊಂದು ಹಾರರ್‌ ಸಿನಿಮಾ
Published 15 ಅಕ್ಟೋಬರ್ 2023, 18:59 IST
Last Updated 15 ಅಕ್ಟೋಬರ್ 2023, 18:59 IST
ಅಕ್ಷರ ಗಾತ್ರ

ಪ್ರಿಯಾಂಕಾ ಉಪೇಂದ್ರ ಅವರ ಹಾರರ್‌ ಸಿನಿಮಾ ‘ಮಮ್ಮಿ’ ಉತ್ತಮ ಯಶಸ್ಸು ಕಂಡಿತ್ತು. ಅದೇ ಚಿತ್ರತಂಡದಿಂದ ನಂತರ ‘ದೇವಕಿ’ ಸಿನಿಮಾ ಬಂದಿದ್ದು, ಉಪೇಂದ್ರ ಪುತ್ರಿಯೂ ಅದರಲ್ಲಿ ನಟಿಸಿದ್ದರು. ಇದೀಗ ನಿರ್ದೇಶಕ ಲೋಹಿತ್‌ ಜೊತೆಗೂಡಿ ನಟಿ ಪ್ರಿಯಾಂಕಾ ಮತ್ತೊಂದು ಹಾರರ್‌ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದೊಂದಿಗೆ ರಾಧಿಕಾ ಕುಮಾರಸ್ವಾಮಿಯವರ ಸಹೋದರ ರವಿರಾಜ್ ನಿರ್ಮಾಪಕರಾಗುತ್ತಿದ್ದಾರೆ.

‘ಇದೊಂದು ಪ್ರಯೋಗಾತ್ಮಕ ಚಿತ್ರ. ಕನ್ನಡದಲ್ಲಿ ಈವರೆಗೆ ಮಾಡಿರದ ಪ್ರಯೋಗವೊಂದು ಈ ಚಿತ್ರದಲ್ಲಾಗಿದೆ. ಪ್ರೇಕ್ಷಕರಿಗೆ ಅತ್ಯಂತ ಭಯಾನಕ ಅನುಭವ ನೀಡುವ ಹಾರರ್ ಜಾನರ್‌ನ ಕಥೆಯಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದೆ. ಉಳಿದ ಮಾಹಿತಿಗಳನ್ನು ಶೀಘ್ರದಲ್ಲಿಯೇ ಹಂಚಿಕೊಳ್ಳುತ್ತೇವೆ’ ಎಂದು ನಿರ್ದೇಶಕ ಲೋಹಿತ್‌ ತಿಳಿಸಿದ್ದಾರೆ. 

‘ಅ.17ರಂದು ಉಪೇಂದ್ರ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಲಿದ್ದಾರೆ. ಬಹುತೇಕ ‘ಮಮ್ಮಿ’ ಚಿತ್ರತಂಡವೇ ತಾಂತ್ರಿಕ ವರ್ಗದಲ್ಲಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ’ ಎಂದು ಚಿತ್ರತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT