ಭಾನುವಾರ, ಸೆಪ್ಟೆಂಬರ್ 19, 2021
25 °C

ನಿರ್ಮಾಪಕ ಆಗಲಿದ್ದಾರೆ ದುಲ್ಕರ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಇದೀಗ ನಿರ್ಮಾಪಕರಾಗಲು ಹೊರಟಿದ್ದಾರೆ. ಅನೂಪ್‌ ಸತ್ಯನ್‌ ನಿರ್ದೇಶನದ ಚಿತ್ರವನ್ನು ಅವರು ನಿರ್ಮಾಣ ಮಾಡಲಿದ್ದರಂತೆ. 

ಸ್ಟೈಲಿಷ್‌ ಸ್ಟಾರ್‌ ದುಲ್ಕರ್‌ ಬಾಲಿವುಡ್‌ನಲ್ಲಿ ತಾವು ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ‘ದ ಜೋಯಾ ಫ್ಯಾಕ್ಟರ್‌’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಇತ್ತೀಚಿನ ಸುದ್ದಿ ಪ್ರಕಾರ ಈ ಚಿತ್ರಕ್ಕೆ ಸೆನ್ಸಾರ್‌ ಬೋರ್ಡ್‌ ‘ಯು’ ಪ್ರಮಾಣಪತ್ರ ನೀಡಿದೆ. ಈ ನಡುವೆ ಈ ನಟ ಮಲಯಾಳಂನಲ್ಲಿ ಚಿತ್ರ ನಿರ್ಮಾಣದತ್ತ ದೃಷ್ಟಿ ನೆಟ್ಟಿದ್ದು, ಈ ಚಿತ್ರದಲ್ಲಿ ಆ್ಯಕ್ಷನ್‌ ಕಿಂಗ್‌ ಸುರೇಶ್‌ ಗೋಪಿ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. 

ಈ ಚಿತ್ರವನ್ನು ಹಿರಿಯ ಚಿತ್ರನಿರ್ದೇಶಕ ಸತ್ಯನ್‌ ಅವರ ಮಗ ಅನೂಪ್‌ ಸತ್ಯನ್‌ ನಿರ್ದೇಶನ ಮಾಡಲಿದ್ದು, ಚಿತ್ರದಲ್ಲಿ ಶೋಭನಾ ಹಾಗೂ ನಸ್ರಿಯಾ ನಜೀಂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಚಿತ್ರದಲ್ಲಿ ದುಲ್ಕರ್‌ ಸಹ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಗಾಳಿಸುದ್ದಿ ಇದೆ. 

ಇನ್ನೂ ಹೆಸರಿಡದ ಈ ಚಿತ್ರ ಕೌಟುಂಬಿಕ ಚಿತ್ರವಾಗಿದ್ದು, ಚಿತ್ರದಲ್ಲಿನ ಇತರ ಪಾತ್ರ ಹಾಗೂ ವಿವರಗಳ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ನಾಯಕ ನಟ ಸುರೇಶ್‌ ಗೋಪಿ ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್‌ ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಿ, ಸೋತಿದ್ದರು. ಬಳಿಕ ತಮ್ಮ ಸ್ನೇಹಿತರ ಬಳಿ ಸಿನಿಮಾ ಕ್ಷೇತ್ರಕ್ಕೆ ವಾಪಸಾಗುವ ಬಗ್ಗೆ ಹೇಳಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು