ಗುರುವಾರ , ಫೆಬ್ರವರಿ 20, 2020
17 °C
ಚಿತ್ರಮಂದಿರಗಳಲ್ಲಿ ದಾಂದಲೆ, ಗಾಜು ಒಡೆದು ಆಕ್ರೋಶ

‘ಪಾಣಿಪತ್’ ಚಿತ್ರದ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೈಪುರ: ಆಶುತೋಷ್ ಗೋವಾರಿಕರ್ ನಿರ್ದೇಶನಕ ‘ಪಾಣಿಪತ್‌’ ಹಿಂದಿ ಚಿತ್ರದ ವಿರುದ್ಧ ರಾಜಸ್ಥಾನದಲ್ಲಿ ಜಾಟ್‌ ಸಮುದಾಯ ಸಿಡಿದೆದ್ದಿದೆ. ಚಿತ್ರ ಪ್ರದರ್ಶನದ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ. ರಾಜ್ಯದ ಎಲ್ಲಾ ಕಡೆ ಪ್ರದರ್ಶನ ರದ್ದುಪಡಿಸಲಾಗಿದೆ.

ಜೈಪುರದ ಎರಡು ಮಲ್ಟಿಪ್ಲೆಕ್ಸ್‌ಗಳ ಮೇಲೆ ದಾಳಿ ನಡೆದಿದ್ದು, ಜಾಟ್‌ ಸಮುದಾಯದ ಪ್ರತಿಭಟನಕಾರರು ಅಶುತೋಷ್‌ ಅವರ ಪ್ರತಿಕೃತಿಯನ್ನು ದಹಿಸಿದರು.

ಭರತ್‌ಪುರದ ರಾಜ ಮಹಾರಾಜ ಸೂರಜ್‌ಮಲ್‌ ಅವರನ್ನು ಚಿತ್ರದಲ್ಲಿ ತಪ್ಪಾಗಿ ಚಿತ್ರಿಸಲಾಗಿದೆ ಎಂದು ದೂರಿದ್ದಾರೆ.

 ‘ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಸೂರಜ್‌ಮಲ್‌ ಅವರ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಜಾಟ್‌ ಸಮುದಾಯಕ್ಕೆ ರಜಪೂತ್ ಸಮುದಾಯವೂ ಬೆಂಬಲ ವ್ಯಕ್ತಪಡಿಸಿದೆ’ ಎಂದು ಜಾಟ್‌ ಮುಖಂಡ ನೆಮ್‌ ಸಿಂಗ್ ಹೇಳಿದ್ದಾರೆ.

‘ಪಾಣಿಪತ್ ಚಿತ್ರದಲ್ಲಿ ತಪ್ಪು ಮಾಹಿತಿಗಳನ್ನು ತೋರಿಸುವುದರ ಜತೆಗೆ ರಾಜಸ್ಥಾನದ ಇತಿಹಾಸವನ್ನು ಅಸ್ಪಷ್ಟವಾಗಿ ತೋರಿಸುವುದನ್ನು ಸಹಿಸಲಾಗದು’ ಎಂದು ರಜಪೂತ್ ಸಭಾದ ಅಧ್ಯಕ್ಷ ಗಿರಿರಾಜ್‌ ಸಿಂಗ್ ಲೋಟವಾರಾ ಅವರು ಹೇಳಿದ್ದಾರೆ.

ಮಹಾರಾಜ ಸೂರಜ್‌ಮಲ್ ಅವ ರನ್ನು ದುರಾಸೆಯ ಚಕ್ರವರ್ತಿ ಎಂದು ಚಿತ್ರದಲ್ಲಿ ಪ್ರತಿಬಿಂಬಿಸಲಾಗಿದೆ ಎಂದು ಜಾಟ್ ಸಮುದಾಯ ಆರೋಪಿಸಿದೆ.

ಚಿತ್ರವಿತರಕರ ಜತೆ ಮಾತನಾಡುತ್ತೇವೆ: ಚಿತ್ರವನ್ನು ತಪ್ಪಾಗಿ ಚಿತ್ರಿಸ ಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸು ವಂತೆ ಸೆನ್ಸಾರ್‌ ಮಂಡಳಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ತಿಳಿಸಿದ್ದಾರೆ. ವಿತರಕರ ಜತೆಗೂ ಮಾತುಕತೆ ನಡೆಸುತ್ತೇವೆ.

ಜಾಟ್‌ ಸಮುದಾಯದ ಮನವರಿಕೆ ನಂತರವೇ ಪ್ರದರ್ಶನಕ್ಕೆ ರಾಜ್ಯದಾದ್ಯಂತ ಅವಕಾಶ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

‘ಪಾಣಿಪತ್’ ಚಿತ್ರ ಪ್ರದರ್ಶನವನ್ನು ಉತ್ತರ ಭಾರತದಲ್ಲಿ ನಿಷೇಧಿಸಬೇಕು ಎಂದು ರಾಜಸ್ಥಾನ ಪ್ರವಾಸೋದ್ಯಮ ಸಚಿವ ವಿಶ್ವೇಂದರ್‌ ಸಿಂಗ್‌ ಭಾನುವಾರ ಆಗ್ರಹಿಸಿದ್ದರು.

‘ಉದಾತ್ತ ಸ್ವಾಭಿಮಾನಿಯಾಗಿದ್ದ ರಾಜ ಸೂರಜ್‌ಮಲ್‌ನನ್ನು ಚಿತ್ರದಲ್ಲಿ ತಪ್ಪಾಗಿ ಚಿತ್ರಿಸುವುದು ಖಂಡನೀಯ’ ಎಂದು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವೀಟ್‌ ಮಾಡಿದ್ದಾರೆ.

ಬಿಕಾನೇರ್‌ನಲ್ಲೂ ಚಿತ್ರದ ಪ್ರದರ್ಶನ ವಿರುದ್ಧ ಪ್ರತಿಭಟನೆ ನಡೆದಿದೆ. ಚಿತ್ರವನ್ನು ನಿಷೇಧಿಸಬೇಕೆಂದು ಅಖಿಲಭಾರತ ಜಾಟ್ ಆರಕ್ಷಣ್‌ ಸಮಿತಿ ಆಗ್ರಹಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು