ಚೇತನ್ ಕುಮಾರ್ ನಿರ್ದೇಶನದ, ನಟ ದಿವಂಗತ ಪುನೀತ್ ರಾಜ್ಕುಮಾರ್ ನಟನೆಯ ಕೊನೆಯ ಚಿತ್ರ ‘ಜೇಮ್ಸ್’ ಬಿಡುಗಡೆ ಹೊಸ್ತಿಲಿನಲ್ಲೇ, ಚಿತ್ರದ ಮೊದಲ ಲಿರಿಕಲ್ ಹಾಡು ‘ಟ್ರೇಡ್ಮಾರ್ಕ್’ ಬಿಡುಗಡೆಯಾಗಿದೆ. ರ್ಯಾಪ್ ಹಾಡಿಗೆ ‘ಅಪ್ಪು’ ಸಖತ್ ಆಗಿಯೇ ಸ್ಟೆಪ್ಸ್ ಹಾಕಿದ್ದಾರೆ.

ಚರಣ್ರಾಜ್ ಸಂಗೀತ ನೀಡಿರುವ ರ್ಯಾಪ್ ಹಾಡಿಗೆ, ಚಂದನ್ ಶೆಟ್ಟಿ, ವಿಕ್ಕಿ, ಅದಿತಿ ಸಾಗರ್, ಶರ್ಮಿಳಾ, ಯುವ ರಾಜ್ಕುಮಾರ್ ಧ್ವನಿ ನೀಡಿದ್ದಾರೆ. ಶೇಖರ್ ಮಾಸ್ಟರ್ ನೃತ್ಯ ನಿರ್ದೇಶನ ಈ ಹಾಡಿಗಿದೆ. ಹಾಡಿನಲ್ಲಿ ನಟಿಯರಾದ ಶ್ರೀಲೀಲಾ, ಆಶಿಕಾ ರಂಗನಾಥ್ ಹಾಗೂ ರಚಿತಾ ರಾಮ್ ಕೂಡಾ ಕಾಣಿಸಿಕೊಂಡಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾ ಪುನೀತ್ ರಾಜ್ಕುಮಾರ್ ಜನ್ಮದಿನದಂದೇ(ಮಾ.17)ತೆರೆಕಾಣುತ್ತಿದೆ.

ಮಾಫಿಯಾ ಕಥೆಯನ್ನು ಚಿತ್ರವು ಹೊಂದಿದ್ದು, ಜೆ–ವಿಂಗ್ ಎಂಬ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಏಜೆಂಟ್ ಪಾತ್ರದಲ್ಲಿ ಪವರ್ಸ್ಟಾರ್ ಪುನೀತ್ ಅವರು ಪವರ್ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಆ್ಯಕ್ಷನ್ ಪ್ಯಾಕ್ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಡಬ್ಬಿಂಗ್ ಪೂರ್ಣಗೊಳ್ಳುವ ಮೊದಲೇ ಪುನೀತ್ ಅವರು ನಿಧನರಾದ ಕಾರಣ ಪುನೀತ್ ಅವರ ಪಾತ್ರಕ್ಕೆ ನಟ ಶಿವರಾಜ್ಕುಮಾರ್ ಅವರು ಧ್ವನಿ ನೀಡಿದ್ದಾರೆ.

‘ಜೇಮ್ಸ್’ ಪ್ರಿರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲು ಚಿತ್ರತಂಡವು ನಿರ್ಧರಿಸಿದೆ. ಹೊಸಪೇಟೆಯಲ್ಲಿ ಪ್ರಿರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಇತರೆ ಚಿತ್ರರಂಗದ ಖ್ಯಾತ ನಟರನ್ನೂ ಆಹ್ವಾನಿಸಲಾಗುತ್ತಿದೆ.ನೆರೆ ರಾಜ್ಯಗಳಲ್ಲೂ ಪ್ರಿರಿಲೀಸ್ ಕಾರ್ಯಕ್ರಮ ಆಯೋಜಿಸಲು ಚಿತ್ರತಂಡವು ಚಿಂತನೆ ನಡೆಸಿದೆ. ಕನ್ನಡ ಸೇರಿದಂತೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಯಲ್ಲಿ ಚಿತ್ರವು ತೆರೆಕಾಣುತ್ತಿದೆ.

ಜೇಮ್ಸ್ ಚಿತ್ರದ ಬಿಡುಗಡೆಗಾಗಿ ಪ್ರೇಕ್ಷಕರು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರನ್ನು ಒಂದೇ ಸಿನಿಮಾದಲ್ಲಿ ನೋಡುವ ಅಭಿಮಾನಿಗಳ ಆಸೆ ‘ಜೇಮ್ಸ್’ ಮೂಲಕ ಈಡೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.