ಗುರುವಾರ , ಮೇ 26, 2022
26 °C

ನಾಳೆ ಪುನೀತ್‌ ನಟನೆಯ ‘ಜೇಮ್ಸ್‌’ ಚಿತ್ರದ ವಿಶೇಷ ಪೋಸ್ಟರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚೇತನ್‌ ಕುಮಾರ್‌ ನಿರ್ದೇಶನದ, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ ‘ಜೇಮ್ಸ್‌’ ಚಿತ್ರೀಕರಣ ಪೂರ್ಣಗೊಂಡಿದ್ದು, ಜ.26ರಂದು ಸಿನಿಮಾದ ವಿಶೇಷ ಪೋಸ್ಟರ್‌ ಅನಾವರಣಗೊಳ್ಳಲಿದೆ.

ಗುರುವಾರ ಬೆಳಗ್ಗೆ 11.11ಕ್ಕೆ ವಿಶೇಷ ಪೋಸ್ಟರ್‌ ಬಿಡುಗಡೆಯಾಗಲಿದ್ದು, ಗುರುವಾರವೇ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರು ಟ್ರೆಂಡಿಂಗ್‌ನಲ್ಲಿತ್ತು. ‘#Bolobolojames’ ಎನ್ನುವ ಹ್ಯಾಷ್‌ಟ್ಯಾಗ್‌ನಡಿ ಸಾವಿರಾರು ಅಪ್ಪು ಅಭಿಮಾನಿಗಳು ಟ್ವೀಟ್‌ ಮಾಡಿ ಪೋಸ್ಟರ್‌ ಬಿಡುಗಡೆಗೆ ಶುಭಕೋರಿದ್ದಾರೆ. ‘ಅಪ್ಪು ಅವರ ಕೊನೆಯ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ ಸಿಗುತ್ತಿರುವುದಕ್ಕೆ ಒಂದೆಡೆ ಸಂತೋಷವಾಗುತ್ತಿದೆ. ಆದರೆ ಅಪ್ಪು ಅವರೇ ಇಲ್ಲದೆ ಇದನ್ನು ಸಂಭ್ರಮಿಸಲು ಕಷ್ಟವಾಗುತ್ತಿದೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ. ಇನ್ನೋರ್ವ ಅಭಿಮಾನಿ, ಪೋಸ್ಟರ್‌ನಲ್ಲಿ ಕೇವಲ ಪುನೀತ್‌ ರಾಜ್‌ಕುಮಾರ್‌ ಎಂದಲ್ಲ, ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಎಂದು ಹೆಸರು ಹಾಕಿ ಎಂದು ಒತ್ತಾಯಿಸಿದ್ದಾರೆ.

ಜೇಮ್ಸ್‌ ಚಿತ್ರದ ಬಿಡುಗಡೆಗಾಗಿ ಪ್ರೇಕ್ಷಕರು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪುನೀತ್‌ ಅವರ ಜನ್ಮದಿನವಾದ ಮಾರ್ಚ್‌ 17ರಂದು ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆಯಾದರೂ, ಚಿತ್ರತಂಡ ಈ ಕುರಿತು ಅಧಿಕೃತವಾದ ಘೋಷಣೆಯನ್ನು ಇನ್ನಷ್ಟೇ ಮಾಡಬೇಕಾಗಿದೆ. ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರನ್ನು ಒಂದೇ ಸಿನಿಮಾದಲ್ಲಿ ನೋಡುವ ಅಭಿಮಾನಿಗಳ ಆಸೆ ‘ಜೇಮ್ಸ್‌’ ಮೂಲಕ ಈಡೇರಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು