ಗುರುವಾರ , ನವೆಂಬರ್ 26, 2020
19 °C

ಬೇರೆ ಭಾಷೆಗಳಲ್ಲೂ ‘ಯುವರತ್ನʼ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಯುವರತ್ನ ಬಿಡುಗಡೆಗೆ ಸಿದ್ಧವಾಗಿದೆ. ಅದು ಇತರ ಭಾಷೆಗಳಿಗೂ ಡಬ್‌ ಆಗುತ್ತಿದೆಯೇ ಎಂಬ ಪ್ರಶ್ನೆ ಪುನೀತ್‌ ಅಭಿಮಾನಿಗಳದ್ದು. 

ಅದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ನಿರ್ದೇಶಕ ಸಂತೋಷ್‌ ಆನಂದರಾಮ್‌, ‘ಎಲ್ಲರೂ ಈ ಪ್ರಶ್ನೆ ಕೇಳುತ್ತಿದ್ದಾರೆ. ಶೀಘ್ರವೇ ನಿರ್ಮಾಪಕರು ಈ ಬಗ್ಗೆ ಹೇಳಲಿದ್ದಾರೆ. ಒಮ್ಮೆ ಪ್ರಚಾರ ಆರಂಭವಾದರೆ ಎಲ್ಲವೂ ಗೊತ್ತಾಗುತ್ತದೆʼ ಎಂದು ಬರೆದಿದ್ದಾರೆ. 

ನಿರ್ಮಾಪಕ ವಿಜಯ್‌ ಕಿರಗಂದೂರು ಈ ಬಗ್ಗೆ ಕೆಲವೇ ದಿನಗಳಲ್ಲಿ ಪ್ರಕಟಿಸಲಿದ್ದಾರೆ. 

ಯುವರತ್ನ ಚಿತ್ರದಲ್ಲಿ ಪುನೀತ್‌ ಅವರು ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್‌ ಗಡ್ಡಬಿಟ್ಟು ನಿಂತಿರುವ ಚಿತ್ರ ಪೋಸ್ಟರ್‌ನಲ್ಲಿ ರಾರಾಜಿಸುತ್ತಿದೆ. ಚಿತ್ರದ ಪರಿಚಯಾತ್ಮಕ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು