ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮೈಲ್ ಶ್ರೀನು ನಿರ್ದೇಶನದ ‘ಮೈರಾ’ ಚಿತ್ರಕ್ಕೆ ಕೈಜೋಡಿಸಿದ ಪುರಿ ಜಗನ್ನಾಥ್‌ 

Published 3 ಏಪ್ರಿಲ್ 2024, 13:33 IST
Last Updated 3 ಏಪ್ರಿಲ್ 2024, 13:33 IST
ಅಕ್ಷರ ಗಾತ್ರ

ಈ ಹಿಂದೆ ‘ತೂಫಾನ್’, ‘ಬಳ್ಳಾರಿ ದರ್ಬಾರ್’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ‘ಮೈರಾ’ ಚಿತ್ರಕ್ಕೆ ಅಣಿಯಾಗಿದ್ದಾರೆ. ಕನ್ನಡ, ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕಾಗಿ ತೆಲುಗಿನ ಹೆಸರಾಂತ ನಿರ್ದೇಶಕ ಪುರಿ ಜಗನ್ನಾಥ್‌, ಶ್ರೀನು ಜೊತೆ ಕೈಜೋಡಿಸಿದ್ದಾರೆ. 

‘ನಾನು ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ‘ಮೈರಾ’ ಚಿತ್ರವನ್ನು ಇವೆರಡು ಭಾಷೆಗಳಲ್ಲಿ ಮಾಡುತ್ತಿದ್ದೇನೆ. ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು ಉಳಿದ ಭಾಷೆಗಳಿಗೆ ಡಬ್‌ ಆಗಲಿದೆ. ಈಗಿನ ಟ್ರೆಂಡ್‌ಗೆ ಸೂಕ್ತವಾಗಿರುವ ಬಿಗ್‌ಬಜೆಟ್‌ ಕಥೆ. ಪುರಿ ಜಗನ್ನಾಥ್‌ ನಮಗೆ ಮಾರ್ಗದರ್ಶಕರಾಗಿ ಜೊತೆಯಾಗುತ್ತಾರೆ. ಈ ಬಗ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವೆ’ ಎನ್ನುತ್ತಾರೆ ಶ್ರೀನು.

ಪುರಿ ಜಗನ್ನಾಥ್‌ ಪುತ್ರನೇ ಈ ಸಿನಿಮಾಕ್ಕೆ ನಾಯಕ ಎನ್ನುತ್ತಿವೆ ಮೂಲಗಳು. ‘ಪುರಿ ಪುತ್ರನ ಜೊತೆಗೆ ಸಿನಿಮಾ ಮಾಡುವ ಕುರಿತು ಮಾತುಕತೆ ನಡೆದಿರುವುದು ನಿಜ. ಆ ಬಗ್ಗೆ ಈಗಲೇ ಪ್ರತಿಕ್ರಿಯಿಸಲಾರೆ’ ಎಂದು ಶ್ರೀನು ತಿಳಿಸಿದ್ದಾರೆ.

‘ಮೈರಾ’ ಚಿತ್ರ ಪ್ರೀಪ್ರೊಡಕ್ಷನ್‌ ಹಂತದಲ್ಲಿದೆ. ಕಲಾವಿದರು ಹಾಗೂ ತಾಂತ್ರಿಕವರ್ಗದ ಕುರಿತು ಶೀಘ್ರದಲ್ಲಿ ಅಪ್‌ಡೇಟ್ ನೀಡುವುದಾಗಿ ಚಿತ್ರತಂಡ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT