ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಪ–ದಿ ರೂಲ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಚಿತ್ರ
Published 11 ಸೆಪ್ಟೆಂಬರ್ 2023, 13:29 IST
Last Updated 11 ಸೆಪ್ಟೆಂಬರ್ 2023, 13:29 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗಿನ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ' ಚಿತ್ರದ ಭಾಗ 2 ‘ಪುಷ್ಪ–ದಿ ರೂಲ್’ ಮುಂದಿನ ವರ್ಷ(2024) ಆಗಸ್ಟ್15ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಅಧಿಕೃತವಾಗಿ ಚಿತ್ರತಂಡ ತಿಳಿಸಿದೆ.

ಚಿತ್ರ ಬಿಡುಗಡೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಟ ಅಲ್ಲು ಅರ್ಜುನ್‌ ವಿಶಿಷ್ಟ ಪೋಸ್ಟರ್ ಹಂಚಿಕೊಂಡು, ಮುಂದಿನ ವರ್ಷ ಆಗಸ್ಟ್15ಕ್ಕೆ ಪುಷ್ಪ:ದಿ ರೂಲ್‌ ಚಿತ್ರ ತೆರೆಗೆ ಬರಲಿದೆ ಎಂದು ಬರೆದುಕೊಂಡಿದ್ದಾರೆ. ಇದೀಗ ಪುಷ್ಪ:ದಿ ರೂಲ್‌ ಹ್ಯಾಶ್‌ಟ್ಯಾಗ್‌ ಭಾರೀ ಟ್ರೆಂಡ್‌ ಆಗುತ್ತಿದೆ.

ಈ ಚಿತ್ರವನ್ನು ಸುಕುಮಾರ್‌ ನಿರ್ದೇಶಿಸುತ್ತಿದ್ದು, ಮೈತ್ರಿ ಮೂವೀಸ್‌ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

ಅಲ್ಲು ಅರ್ಜುನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT