ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್‌ಆರ್‌ಆರ್‌’ ಚಿತ್ರದ ಬಗ್ಗೆ ಪಿಯುಸಿ ಪರೀಕ್ಷೆಯಲ್ಲಿ ಪ್ರಶ್ನೆ: ಫೋಟೊ ವೈರಲ್

Last Updated 12 ಮೇ 2022, 12:24 IST
ಅಕ್ಷರ ಗಾತ್ರ

ಹೈದರಾಬಾದ್: ತೆಲುಗು ನಟರಾದಜೂನಿಯರ್‌ ಎನ್‌ಟಿಆರ್– ರಾಮ್ ಚರಣ್ ಅಭಿನಯದ ‘ಆರ್‌ಆರ್‌ಆರ್‌’ ಸಿನಿಮಾದ ಬಗ್ಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿದೆ.

ಇದೀಗ ಪ್ರಶ್ನೆ ಪತ್ರಿಕೆಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾ ಮಾರ್ಚ್‌ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

₹1,100 ಕೋಟಿಗೂ ಹೆಚ್ಚು ಗಳಿಕೆ ಕಾಣುವ ಮೂಲಕ ಹಲವು ದಾಖಲೆಗಳನ್ನು ಬರೆದಿದೆ. ಚಿತ್ರ ಬಿಡುಗಡೆಯಾಗಿ 50 ದಿನ ಕಳೆದರೂ ಸಿನಿಮಾದ ಬಗ್ಗೆ ಇರುವ ಹವಾ ಮಾತ್ರ ಕಡಿಮೆಯಾಗಿಲ್ಲ.

ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ‘ಆರ್‌ಆರ್‌ಆರ್‌’ ಸಿನಿಮಾ ಕುರಿತು ಪ್ರಶ್ನೆಯೊಂದನ್ನು ಕೇಳಲಾಗಿದೆ.

‘ನೀವು ‘ಆರ್‌ಆರ್‌ಆರ್‌’ ಸಿನಿಮಾ ಹಾಗೂ ಕೋಮರಂ ಭೀಮ್‌ ಪಾತ್ರದಲ್ಲಿ ಎನ್‌ಟಿಆರ್‌ ಅವರ ಅಭಿನಯವನ್ನು ನೋಡಿದ್ದೀರಿ. ಚಿತ್ರದ ಯಶಸ್ಸಿನ ಬಳಿಕ ನಿಮಗೆ ಪ್ರತಿಷ್ಠಿತ ಟಿವಿ ವಾಹಿನಿಯಲ್ಲಿ ಎನ್‌ಟಿಆರ್‌ ಅವರನ್ನು ಸಂದರ್ಶನ ಮಾಡಲು ಅವಕಾಶ ಸಿಕ್ಕಿದೆ ಎಂದು ಊಹಿಸಿಕೊಳ್ಳಿ’ ಎಂದು ಪ್ರಶ್ನೆ ಕೇಳಲಾಗಿದೆ.

‘ಚಿತ್ರದ ಸ್ವರೂಪ, ನಿರ್ದೇಶಕರೊಂದಿಗೆ ನಟನ ಬಾಂಧವ್ಯ, ಚಿತ್ರ ಕಥೆ, ಸಹ ನಟರ ಪಾತ್ರ, ಸಿನಿಮಾದ ಪ್ರಭಾವ’ –ಈ ವಿಚಾರಗಳ ಆಧಾರದ ಮೇಲೆ ಎನ್‌ಟಿಆರ್ ಕುರಿತು ಸಂದರ್ಶನ ಬರೆಯಿರಿ ಎಂದು ಸೂಚಿಸಲಾಗಿದೆ.

ಎನ್‌ಟಿಆರ್‌ ಅಭಿಮಾನಿಗಳು ಈ ಪ್ರಶ್ನೆಪತ್ರಿಕೆಯ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT