‘ಹೊಂದಿಸಿ ಬರೆಯಿರಿ’ ಖ್ಯಾತಿಯ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾದ ನಾಯಕಿಯಾಗಿ ರಚನಾ ಇಂದರ್ ನಟಿಸಲಿದ್ದಾರೆ.

ಈಗಾಗಲೇ ಸಿತಾರಾ, ರಾಜೇಶ್ ನಟರಂಗ ಚಿತ್ರತಂಡ ಸೇರಿಕೊಂಡಿದ್ದು, ‘ಅಕ್ಷರ’ ಎಂಬ ಪಾತ್ರಕ್ಕೆ ರಚನಾ ಬಣ್ಣಹಚ್ಚಲಿದ್ದಾರೆ. ನಾಯಕ ನಿಹಾರ್ ಮುಖೇಶ್ ಜೋಡಿಯಾಗಿ ಇವರು ಅಭಿನಯಿಸಲಿದ್ದಾರೆ. ‘ತೀರ್ಥರೂಪ ತಂದೆಯವರಿಗೆ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮೈಸೂರು, ಕೊಚ್ಚಿ, ಮೂಡಿಗೆರೆ ಸುತ್ತಮುತ್ತ ಶೇ 50ರಷ್ಟು ಶೂಟಿಂಗ್ ಪೂರ್ಣವಾಗಿದೆ. ಸಂಕ್ರಾಂತಿ ಬಳಿಕ ನಾಲ್ಕನೇ ಹಂತದ ಚಿತ್ರೀಕರಣವನ್ನು ಮೂಡಿಗೆರೆಯಲ್ಲಿ ಮಾಡಲು ಚಿತ್ರತಂಡ ಸಜ್ಜಾಗಿದೆ. ಆನಂತರ ಉತ್ತರ ಭಾರತದ ಕಡೆ ಚಿತ್ರೀಕರಣ ನಡೆಸಲಿದೆ.

ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ನಡಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ರಾಮೇನಹಳ್ಳಿ ಜಗನ್ನಾಥ ಅವರೇ ಚಿತ್ರದ ಕಥೆ ಬರೆದಿದ್ದಾರೆ. ಚಿತ್ರವು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಿದ್ಧವಾಗುತ್ತಿದ್ದು, ತೆಲುಗಿನಲ್ಲಿ ‘ಪ್ರಿಯಮೈನ ನಾನ್ನಕು’ ಎಂಬ ಶೀರ್ಷಿಕೆ ಇಡಲಾಗಿದೆ. ಕೌಟುಂಬಿಕ ಹಿನ್ನೆಲೆ ಕಥೆಯುಳ್ಳ ಸಿನಿಮಾಗೆ ದೀಪಕ್ ಯರಗೇರಾ ಛಾಯಾಚಿತ್ರಗ್ರಹಣ, ಜೋ ಕೋಸ್ಟ್ ಸಂಗೀತ, ಪ್ರಶಾಂತ್ ರಾಜಪ್ಪ ಸಂಭಾಷಣೆ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.