ಮಂಗಳವಾರ, ಜನವರಿ 18, 2022
20 °C

‘ಗರಡಿ’ ಮನೆ ಪ್ರವೇಶಿಸಿದ ರಚಿತಾ ರಾಮ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಲೆಕ್ಕ ಹಾಕಿದರೆ ಹತ್ತಕ್ಕೂ ಹೆಚ್ಚು ಸಿನಿಮಾಗಳು ರಚಿತಾ ಕೈಯಲ್ಲಿವೆ. ಇಷ್ಟೊಂದು ಸಿನಿಮಾ ಬ್ಯಾಂಕ್‌ ಇಟ್ಟುಕೊಂಡಿರುವ ನಟಿ ಚಂದನವನದಲ್ಲಿ ಬೇರೊಬ್ಬರಿಲ್ಲ.

‘ಏಕ್‌ ಲವ್‌ ಯಾ’, ‘ಲವ್‌ ಯೂ ರಚ್ಚು’, ‘ಮಾನ್ಸೂನ್‌ ರಾಗ’, ‘ಲವ್‌ ಮಿ ಆರ್‌ ಹೇಟ್‌ ಮಿ’, ‘ಶಬರಿ’ ಹೀಗೆ ಸಿನಿಮಾ ಪಟ್ಟಿ ಬೆಳೆಯುತ್ತಿದೆ. ಕಳೆದ ತಿಂಗಳಷ್ಟೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ‘ಕ್ರಾಂತಿ’ ಸಿನಿಮಾಗೆ ಪ್ರವೇಶಿಸಿದ್ದ ರಚಿತಾ ರಾಮ್‌, ಇದೀಗ ಯೋಗರಾಜ್‌ ಭಟ್‌ ಅವರ ‘ಗರಡಿ’ ಮನೆಗೆ ಹೆಜ್ಜೆ ಇಟ್ಟಿದ್ದಾರೆ. ‘ಗಾಳಿಪಟ–2’ ಸಿದ್ಧಪಡಿಸಿ ಹಾರಿಬಿಡಲು ಕಾಯುತ್ತಿರುವ ಯೋಗರಾಜ್‌ ಭಟ್‌, ‘ಗರಡಿ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಸೌಮ್ಯ ಫಿಲಂಸ್ ಬ್ಯಾನರಿನಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಕೃಷಿ ಸಚಿವ, ನಟ ಬಿ.ಸಿ. ಪಾಟೀಲ ಅವರ ಪತ್ನಿ ವನಜಾ ಪಾಟೀಲ ಹಾಗೂ ಪುತ್ರಿ ಸೃಷ್ಟಿ ಪಾಟೀಲ ಬಂಡವಾಳ ಹೂಡಲಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಯುವ ನಟ ಯಶಸ್ ಸೂರ್ಯ ನಟಿಸುತ್ತಿದ್ಡು, ಇವರಿಗೆ ಜೋಡಿಯಾಗಿ ರಚಿತಾ ಬಣ್ಣಹಚ್ಚಲಿದ್ದಾರೆ. ಬಿ.ಸಿ ಪಾಟೀಲ ಬಹಳ ದಿನಗಳ ನಂತರ ಒಂದು ಪ್ರಮುಖ ಪಾತ್ರಕ್ಕಾಗಿ ಈ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಚಿತ್ರದಲ್ಲಿ ನಟ ದರ್ಶನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 

ಈ ಆ್ಯಕ್ಷನ್‌ ಡ್ರಾಮಾ ಸಿನಿಮಾಗೆ, ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಜಯಂತ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ. ಛಾಯಾಗ್ರಾಹಕ ನಿರಂಜನ್ ಬಾಬು ಇದೇ ಮೊದಲ ಬಾರಿಗೆ ಯೋಗರಾಜ್‌ ಭಟ್‌ ಅವರ ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದು, ಭಟ್ರ ಜೊತೆಗೂಡಿ ‘ಡ್ರಾಮಾ’ ಚಿತ್ರದ ಚಿತ್ರಕಥೆ ರಚಿಸಿದ್ದ ವಿಕಾಸ್ ಈ ಚಿತ್ರದ ಮೂಲಕ ಮತ್ತೊಮ್ಮೆ ಅವರ ಕೈಜೋಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು