ಪ್ರಭಾಸ್ ನಟನೆಯ ‘ರಾಧೆ ಶ್ಯಾಮ’ ಚಿತ್ರದ ಶೂಟಿಂಗ್ ಲಾಕ್ಡೌನ್ಗೂ ಮೊದಲು ಇಟಲಿಯಲ್ಲಿ ನಡೆಯುತ್ತಿತ್ತು. ಕೊರೊನಾ ಪ್ರಕರಣ ಹೆಚ್ಚಾಗಿ ಲಾಕ್ಡೌನ್ ಘೋಷಿಸಿದ ಬಳಿಕ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ಭಾರತಕ್ಕೆ ಮರಳಿತ್ತು ಚಿತ್ರತಂಡ. ಈಗ ಮರಳಿ ಇಟಲಿಗೆ ತೆರಳುವ ಯೋಜನೆ ರಾಧೆ ಶ್ಯಾಮ ತಂಡದ್ದು.

ಈ ಸಿನಿಮಾದ ಶೂಟಿಂಗ್ ಅನ್ನು ಇಟಲಿ ಸೇರಿದಂತೆ ಇತರ ಯುರೋಪ್ ದೇಶಗಳಲ್ಲಿ ಯೋಜನೆ ಚಿತ್ರತಂಡದ್ದಾಗಿತ್ತು. ಲಾಕ್ಡೌನ್ಗೂ ಮೊದಲು ಚಿತ್ರದ ಮುಖದ ಭಾಗದ ಶೂಟಿಂಗ್ ಇಟಲಿಯಲ್ಲಿ ನಡೆದಿತ್ತು.

ಯುರೋಪ್ನಲ್ಲಿ ಕೊರೊನಾ ಸಮಸ್ಯೆ ಹೆಚ್ಚಾದಾಗ ಯುರೋಪ್ ಬೀದಿಗಳಂತೆ ಹೈದರಾಬಾದ್ನಲ್ಲಿ ಸೆಟ್ ಹಾಕಿ ಶೂಟಿಂಗ್ ಮುಂದುವರಿಸಲು ಯೋಚನೆ ಮಾಡಿತ್ತು ತಂಡ. ಆದರೆಈಗ ಯುರೋಪ್ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆ ಕಾರಣಕ್ಕೆ ನಿರ್ಮಾಪಕರು ಮರಳಿ ಇಟಲಿಗೆ ತೆರಳುವ ಯೋಜನೆ ಹಾಕಿದ್ದಾರಂತೆ. ಅಲ್ಲದೇ ಚಿತ್ರದ ಇನ್ನುಳಿದ ಭಾಗವನ್ನು ಯುರೋಪ್ನಲ್ಲೇ ಶೂಟಿಂಗ್ ಮಾಡುವ ಯೋಚನೆ ಅವರದ್ದು.

ಎಲ್ಲವೂ ಸರಿಯಾಗಿ ಇಟಲಿ ಸರ್ಕಾರದಿಂದ ಶೂಟಿಂಗ್ಗೆ ಅನುಮತಿ ಸಿಕ್ಕು, ವೀಸಾ ಸಿಕ್ಕರೆ ರಾಧೆ ಶ್ಯಾಮ ತಂಡ ಅಕ್ಟೋಬರ್ನಲ್ಲಿ ಇಟಲಿಗೆ ಹಾರಲಿದೆ.

ಈ ನಡುವೆ ನಾಯಕಿ ಪೂಜಾ ಹೆಗ್ಡೆ ಕೂಡ ‘ಮೋಸ್ಟ್ ಎಲಿಜಬಲ್ ಬ್ಯಾಚುಲರ್’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದು ಆದಷ್ಟು ಬೇಗ ಶೂಟಿಂಗ್ ಮುಗಿಸಿ ರಾಧೆ ಶ್ಯಾಮ ಚಿತ್ರತಂಡ ಸೇರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.